Bengaluru, ಮೇ 11 -- ಸ್ಯಾಂಡಲ್‌ವುಡ್‌ನಲ್ಲಿ ಹಾಸ್ಯ ನಟನಾಗಿ, ಪೋಷಕ ಕಲಾವಿದನಾಗಿ, ರಂಗಕರ್ಮಿಯಾಗಿ, ಕಿರುತೆರೆ ಹೀಗೆ ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡವರು ನಟ ಮಂಡ್ಯ ರಮೇಶ್.‌ ಇದೀಗ ಇದೇ ಮಂಡ್ಯ ರಮೇಶ್‌ ಅವರ ಮಗಳು ಚಿತ್ರರಂಗಕ್ಕೆ ಎಂಟ್ರಿಯಾಗುತ್ತಿದ್ದಾರೆ. ಅದೂ ನಾಯಕಿಯಾಗಿ. ʻದಿʼ ಹೆಸರಿನ ಸಿನಿಮಾದಲ್ಲಿ ಮಂಡ್ಯ ರಮೇಶ್‌ ಪುತ್ರಿ ದಿಶಾ ರಮೇಶ್‌ ನಾಯಕಿಯಾಗಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮ ನೆರವೇರಿದೆ. ಸ್ವತಃ ಮಂಡ್ಯ ರಮೇಶ್‌ ಅವರೇ ಆಗಮಿಸಿ, ಮಗಳ ಸಿನಿಮಾದ ಟ್ರೇಲರ್‌ ಬಿಡುಗಡೆ ಮಾಡಿಕೊಟ್ಟಿದ್ದಾರೆ.

ವಿ.ಡಿ.ಕೆ ಸಿನಿಮಾಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ, ವಿನಯ್ ವಾಸುದೇವ್ ನಿರ್ದೇಶನದ ಜೊತೆಗೆ ನಾಯಕನಾಗೂ ನಟಿಸಿರುವ ಚಿತ್ರವೇ ಈ ʻದಿʼ. ಟ್ರೇಲರ್‌ನಲ್ಲೇ ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರ ಮೇ 16ರಂದು ತೆರೆಗೆ ಬರಲಿದೆ. ಹಿರಿಯ ನಟ ಮಂಡ್ಯ ರಮೇಶ್ ʻದಿʼ ಚಿತ್ರದ ಟ್ರೇಲರ್ ಅನಾವರಣ ಮಾಡಿ, ಚಿತ್ರ ಯಶಸ್ವಿ ‌ಪ್ರದರ್ಶನ ಕಾಣಲಿ ಎಂದು ಹಾರೈಸಿದರು.

ಇದನ್ನೂ ಓದಿ...