Bengaluru, ಮಾರ್ಚ್ 29 -- Vaamana trailer: ಶಂಕರ್ ರಾಮನ್ ನಿರ್ದೇಶನದಲ್ಲಿ ಮೂಡಿಬಂದಿರುವ ಹಾಗೂ ಧನ್ವೀರ್ ನಾಯಕನಾಗಿ ನಟಿಸಿರುವ ʻವಾಮನʼ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ನಟ ದರ್ಶನ್‌ ಈ ಚಿತ್ರದ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿ ರಿಲೀಸ್‌ ಮಾಡಬೇಕಿತ್ತು. ಆದರೆ, ರಾಜಸ್ತಾನದಲ್ಲಿ ಡೆವಿಲ್‌ ಚಿತ್ರದ ಶೂಟಿಂಗ್‌ನಲ್ಲಿ ಅವರು ಬಿಜಿಯಾದ ಹಿನ್ನೆಲೆಯಲ್ಲಿ, ಅಲ್ಲಿಂದಲೇ ವಿಡಿಯೋ ಮೂಲಕ ಟ್ರೇಲರ್‌ ರಿಲೀಸ್‌ ಮಾಡಿದ್ದಾರೆ.

ಟ್ರೇಲರ್‌ ರಿಲೀಸ್‌ ಮಾಡಿ ಮಾತನಾಡಿದ ದರ್ಶನ್‌, ಧನ್ವೀರ್ ಅಭಿನಯದ ನಾಲ್ಕನೇ ಚಿತ್ರ ʻವಾಮನʼ. ಧನ್ವೀರ್ ಅವರ ಹಿಂದಿನ ಮೂರು ಚಿತ್ರಗಳೂ ವಿಭಿನ್ನವಾಗಿತ್ತು. ಅದರಲ್ಲೂ ʻಕೈವʼ ನನ್ನಿಷ್ಟದ ಚಿತ್ರ. ʻವಾಮನʼ ಚಿತ್ರ ಕೂಡ ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿದೆ. ಈ ಚಿತ್ರದ "ಮುದ್ದು ರಾಕ್ಷಸಿ" ಹಾಡು ನನಗೆ ಬಹಳ ಇಷ್ಟ. ಇಂದು ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರ ಏಪ್ರಿಲ್ 10ರಂದು ತೆರೆಗೆ ಬರುತ್ತಿದೆ. ದಯವಿಟ್ಟು ಎಲ್...