Bengaluru, ಮೇ 12 -- ಕಾಮಿಡಿ ಕಿಲಾಡಿಗಳು ಸೀಸನ್ 3ರಲ್ಲಿ ವಿಜೇತನಾಗಿ ಹೊರಹೊಮ್ಮುವ ಮೂಲಕ ಕರುನಾಡಿನ ಜನರ ಪ್ರೀತಿ ಸಂಪಾದಿಸಿದ್ದರು ನಟ ರಾಕೇಶ್ ಪೂಜಾರಿ. ಆದರೆ, ಇದೀಗ ಇದೇ ರಾಕೇಶ್ ಕೇವಲ 34ನೇ ವಯಸ್ಸಿನಲ್ಲಿ ಇಹಲೋಕ ಲೋಕ ತ್ಯಜಿಸಿದ್ದಾರೆ. ಅವರ ಆಪ್ತ ಬಳಗಕ್ಕೆ ದೊಡ್ಡ ನಷ್ಟದ ಹೊರೆಯನ್ನು ಹೊರೆಸಿ ಅಗಲಿದ್ದಾರೆ. ಪಟ ಪಟ ಮಾತು, ಎಲ್ಲೆಂದರಲ್ಲಿ ಹಾಸ್ಯ ಸೃಷ್ಟಿಸುವ, ನಗು ಉಕ್ಕಿಸುವ ಮನಸ್ಥಿತಿ, ತನ್ನವರು ಎಂದ ಕೂಡಲೇ ಒಂದು ಎದೆಗೊರಗುವ ರಾಕೇಶ್ ಅವರ ಪ್ರೀತಿ ಇನ್ನು ನೆನಪು ಮಾತ್ರ. ಇಂಥ ಸ್ನೇಹಿತನನ್ನು, ಕಲಾವಿದನನ್ನು ಕಳೆದುಕೊಂಡ ಅವರ ಆಪ್ತ ಬಳಗ, ರಾಜಕಾರಣಿಗಳು ಸೇರಿ ಹಲವರು ಸೋಷಿಯಲ್ ಮೀಡಿಯಾದಲ್ಲಿ ಹಾಸ್ಯ ನಟನಿಗೆ ಭಾವುಕ ಬರಹದ ಮೂಲಕ ಅಂತಿಮ ವಿದಾಯ ಹೇಳಿದ್ದಾರೆ. ʻಜಾಸ್ತಿ ನಗೋರು ಜಾಸ್ತಿ ಬದುಕ್ತಾರಂತೆʼ ಅನ್ನೋ ಮಾತು ಅಪ್ಪು ನಿಧನದ ಬಳಿಕ ಮತ್ತೊಮ್ಮೆ ಸುಳ್ಳಾಯ್ತು ಎಂದೂ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ವಿಧಿಯ ಅಟ್ಟಹಾಸ! ರಾಕೇಶ್ ಪೂಜಾರಿಗೆ ತಮ್ಮ ಸಾವಿನ ಮುನ್ಸೂಚನೆ ಮೊದಲೇ ಸಿಕ್ಕಿತ್ತಾ, ಹೀಗ್ಯಾಕೆ ಬ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.