Bengaluru, ಏಪ್ರಿಲ್ 23 -- ಅಜೇಯ್‍ ರಾವ್‍ ಅಭಿನಯದ ಮತ್ತು ನಿರ್ಮಾಣದ 'ಯುದ್ಧಕಾಂಡ' ಚಿತ್ರವು ಏಪ್ರಿಲ್‍ 18ರಂದು ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿನ ಕಾಳಜಿ ಮತ್ತು ಕಳಕಳಿಯ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ಇದರಿಂದ ಚಿತ್ರ ಗೆದ್ದಿದೆ ಎಂದು ಅಜೇಯ್‍ ಖುಷಿಯಾಗಿದ್ದಾರೆ. ಚಿತ್ರ ಎಷ್ಟು ಜನ ನೋಡಿದರು ಎನ್ನುವುದಕ್ಕಿಂತ, ನೋಡಿದ ಜನ ಏನೆಂದರು ಎನ್ನುವುದು ಬಹಳ ಮುಖ್ಯ ಎಂದು ಅಜೇಯ್‍ ಹೇಳಿಕೊಂಡಿದ್ದಾರೆ.

ಮಂಗಳವಾರ ಚಿತ್ರದ ಪತ್ರಿಕಗೋಷ್ಠಿಯಲ್ಲಿ ಈ ಕುರಿತು ಮಾತನಾಡಿರುವ ಅಜೇಯ್‍, 'ಒಂದು ನಿಜವಾದ ಯಶಸ್ಸಿನ ಮೂಲಕ ಇಲ್ಲಿಗೆ ಬಂದು ಕೂತಿದ್ದೇನೆ. ಸಿನಿಮಾ ಎಷ್ಟು ಗಳಿಕೆ ಮಾಡಿತು ಎನ್ನುವುದಕ್ಕಿಂತ, ಮನಸ್ಸಿನಿಂದ ಬರುವ ಪ್ರಶಂಸೆ ಮತ್ತು ಮನಸ್ಸಿನಿಂದ ಸ್ವೀಕಾರ ಮಾಡುವ ಚಿತ್ರಗಳು ಬಹಳ ಅಪರೂಪ. ಪ್ರಪಂಚದಲ್ಲಿ ಮನುಷ್ಯತ್ವ ಉಳಿದುಕೊಂಡಿದೆ ಎಂದು ತೋರಿಸುವುದರ ಸಂಕೇತ ಇದು. ಕನ್ನಡ ಚಿತ್ರಗಳನ್ನು ಜನ ನೋಡುತ್ತಿಲ್ಲ, ಗಳಿಕೆ ಸಾಲುತ್ತಿಲ್ಲ, ಇನ್ನೂ ಕಲೆಕ್ಷನ್‍ ಬರಬೇಕಿತ್ತು ಎಂಬ ಮಾತು ಸಹಜ. ...