ಭಾರತ, ಜುಲೈ 11 -- KD The Devil Movie: ಎಲ್ಲ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಧ್ರುವ ಸರ್ಜಾ ನಾಯಕನಾಗಿ ನಟಿಸಿರುವ "ಕೆಡಿ ದಿ ಡೆವಿಲ್‌" ಸಿನಿಮಾ ಗ್ರ್ಯಾಂಡ್‌ ಆಗಿಯೇ ರಿಲೀಸ್‌ ಆಗಬೇಕಿತ್ತು. ಆದರೆ, ಶೂಟಿಂಗ್‌ ಬಾಕಿ ಇದ್ದ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟಿತ್ತು. ಇದೀಗ ಇದೇ ಸಿನಿಮಾ, ಪ್ಯಾನ್‌ ಇಂಡಿಯನ್‌ ಪ್ರೇಕ್ಷಕರೆಡೆಗೆ ಹೊರಟು ನಿಂತಿದೆ. ಅಂದರೆ, ಈ ಚಿತ್ರದ ಮೊದಲ ಟೀಸರ್‌ ಝಲಕ್‌ ಬಿಡುಗಡೆ ಆಗಿದೆ. ಅದೂ ಮಾಯಾನಗರಿ ಮುಂಬೈನಲ್ಲಿ.

ಜೋಗಿ ಪ್ರೇಮ್ ನಿರ್ದೇಶನ ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ "ಕೆಡಿ ದಿ ಡೆವಿಲ್‌". ಈ ಚಿತ್ರವನ್ನು ದಕ್ಷಿಣ ಭಾರತದ ಹೆಸರಾಂತ ನಿರ್ಮಾಣ ಸಂಸ್ಥೆ ಕೆ.ವಿ.ಎನ್. ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ. ಚಿತ್ರೀಕರಣ ಮುಗಿದು, ಹಾಡುಗಳ ಶೂಟಿಂಗ್ ಸಹ ಮುಗಿಸಿಕೊಂಡಿರುವ ಚಿತ್ರತಂಡ, ಗುರುವಾರ ಮುಂಬೈನಲ್ಲಿ ಚಿತ್ರದ ಟೀಸರ್‌ ಬಿಡುಗಡೆ ಮಾಡಿದೆ.

ಬಹುತಾರಾಗಣದ "ಕೆಡಿ ದಿ ಡೆವಿಲ್‌" ಸಿನಿಮಾದಲ್ಲಿ ಧ್ರುವ ಸರ್ಜಾ ನ...