Bengaluru, ಮೇ 11 -- ʻಕಾಮಿಡಿ ಕಿಲಾಡಿಗಳುʼ ಖ್ಯಾತಿಯ ಮಡೆನೂರು ಮನು ನಾಯಕನಾಗಿ ನಟಿಸಿರುವ 'ಕುಲದಲ್ಲಿ ಕೀಳ್ಯಾವುದೋ' ಚಿತ್ರ ಮೇ 23ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅಬ್ಬರದ ಪ್ರಚಾರ ಕಾರ್ಯದಲ್ಲಿಯೂ ಚಿತ್ರತಂಡ ತೊಡಗಿಸಿಕೊಂಡಿದೆ. ಈ ನಡುವೆ ಈ ಚಿತ್ರದಲ್ಲಿ ಬರುವ ಲಾಭದಲ್ಲಿ ಶೇ. 30ರಷ್ಟು ಹಣವನ್ನು ಸೈನಿಕರ ನಿಧಿಗೆ ಕೊಡುವುದಾಗಿ ನಿರ್ಮಾಪಕ ಸಂತೋಷ್ ಹೇಳಿಕೊಂಡಿದ್ದಾರೆ. 'ಕುಲದಲ್ಲಿ ಕೀಳ್ಯಾವುದೋ' ಚಿತ್ರದ ಟ್ರೇಲರ್ ಶನಿವಾರ ಬಿಡುಗಡೆಯಾಗಿದೆ. ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದವರು ಯೋಧರು.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ಸಂತೋಷ್‍ ಕುಮಾರ್, ʻಈ ಉದ್ವಿಗ್ನ ಪರಿಸ್ಥಿತಿಯಲ್ಲಿ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ. ಕದನ ವಿರಾಮ ಇದ್ದರೂ, ಯಾವ ಕ್ಷಣದಲ್ಲಿ ಏನಾಗುತ್ತದೆ ಎಂದು ಗೊತ್ತಿಲ್ಲ. ಈ ಪರಿಸ್ಥಿತಿಯಲ್ಲಿ ಚಿತ್ರ ಬಿಡುಗಡೆ ಮಾಡಬೇಕಾ? ಎಂದು ಸಾಕಷ್ಟು ಜನರನ್ನು ಕೇಳಿದ್ದೇವೆ. ಇದರಿಂದ ಏನೂ ಆಗುವುದಿಲ್ಲ, ಇದು ಎಲ್ಲರಿಗೂ ಕನೆಕ್ಟ್ ಆಗುವ ಸಿನಿಮಾ, ಒಳ್ಳೆಯ ಸಂದೇಶವಿರುವುದರಿಂದ ಎಲ...