ಭಾರತ, ಮೇ 12 -- ಸ್ಯಾಂಡಲ್‌ವುಡ್‌ನಲ್ಲಿ ನಿರ್ಮಾಣವಾದ ಕಾಂತಾರ ಸಿನಿಮಾ ಅದ್ಯಾವ ಮಟ್ಟಿಗೆ ಇಡೀ ಭಾರತೀಯರನ್ನು ಬರಸೆಳೆಯಿತು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. 16 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಸಿನಿಮಾ 400 ಪ್ಲಸ್‌ ಕೋಟಿ ಗಳಿಕೆ ಕಂಡು ಹೊಸ ದಾಖಲೆಯನ್ನೇ ಬರೆಯಿತು.

ಹೀಗೆ ಯಶಸ್ವಿಯಾದ ಈ ಚಿತ್ರ ಇದೀಗ ಕಾಂತಾರ ಚಾಪ್ಟರ್‌ 1 ಮೂಲಕ ಪ್ರೀಕ್ವೆಲ್‌ ತೆರೆಗೆ ತರುತ್ತಿದೆ. ಪಾರ್ಟ್‌ 2 ಸಿನಿಮಾ ಘೋಷಣೆ ಆಗಿದ್ದೇ ಬಂತು, ಸಾಲು ಸಾಲು ಸಂಕಷ್ಟಗಳು ಈ ಚಿತ್ರತಂಡಕ್ಕೆ ಎದುರಾಗುತ್ತಲೇ ಇದೆ. ಇದೀಗ ಇದೇ ಚಿತ್ರದ ನಟ ರಾಕೇಶ್‌ ಪೂಜಾರಿ ಸಾವು!

ಕಾಂತಾರ ಸಿನಿಮಾದಲ್ಲಿ ರಾಕೇಶ್‌ ಪೂಜಾರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ತಮ್ಮ ಪಾತ್ರದ ಚಿತ್ರೀಕರಣವನ್ನೂ ಮುಗಿಸಿದ್ದ ರಾಕೇಶ್‌, ಇಂದು (ಮೇ 12) ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೇ 11ರಂದು ಇದೇ ಕಾಂತಾರ ಸಿನಿಮಾ ಶೂಟಿಂಗ್‌ನಲ್ಲಿದ್ದ ರಾಕೇಶ್‌, ಚಿತ್ರೀಕರಣ ಮುಗಿಸಿ ಆಪ್ತರ ಮದುವೆಗೆಂದು ಕಾರ್ಕಳಕ್ಕೆ ಭೇಟಿ ನೀಡಿದ್ದಾರೆ. ಸ್ನೇಹಿತರ ಜತೆ ಬೆರೆತು,...