Bengaluru, ಏಪ್ರಿಲ್ 3 -- ʻಕರ್ಣʼ ಸೀರಿಯಲ್‌ ಮಾತ್ರವಲ್ಲ, ಅಭಿಮಾನಿಗಳಿಗೆ ಇನ್ನೊಂದು ಸ್ಪೇಷಲ್‌ ಸರ್ಪ್ರೈಸ್‌ ಕೊಟ್ಟಿದ್ದಾರೆ ಕಿರಣ್‌ ರಾಜ್‌. ಸದ್ದಿಲ್ಲದೆ ಹೊಸ ಸಿನಿಮಾ ಮೂಲಕ ಆಗಮಿಸಿದ್ದಾರೆ,

ʻರಾನಿʼ ಚಿತ್ರದ ಮುಖಾಂತರ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ ನಿರ್ದೇಶಕ ಗುರುತೇಜ್ ಶೆಟ್ಟಿ ಹಾಗೂ ನಟ ಕಿರಣ್ ರಾಜ್ ಮತ್ತೆ ಒಂದಾಗಿದ್ದಾರೆ.

ರಾನಿ ಚಿತ್ರದಲ್ಲಿ ಲಾಂಗ್ ಹಿಡಿದು ಅಬ್ಬರಿಸಿದ ಕಿರಣ್ ರಾಜ್ ಈಗ ಕುದುರೆ ಏರಿ ʻಜಾಕಿʼಯಾಗಿದ್ದಾರೆ ರಾನಿಯಲ್ಲಿ ಕೆಲಸ ಮಾಡಿದ ತಂತ್ರಜ್ಞರ ತಂಡ ಇಲ್ಲೂ ಕೆಲಸ ಮಾಡುತ್ತಿದೆ.

ರಾಘವೇಂದ್ರ ಬಿ ಕೋಲಾರ ಛಾಯಾಗ್ರಹಣ, ಸತೀಶ್ ಕಲಾ ನಿರ್ದೇಶನ ಹಾಗೂ ಉಮೇಶ ಆರ್ ಬಿ ಸಂಕಲನ ಚಿತ್ರಕ್ಕಿದೆ. ಬ್ಲಿಂಕ್‌ ಸಿನಿಮಾದ ನಿರ್ದೇಶಕ ಶ್ರೀನಿಧಿ ಬೆಂಗಳೂರು ಬರವಣಿಗೆ ವಿಭಾಗದಲ್ಲಿದ್ದಾರೆ.

ಗೋಲ್ಡನ್ ಗೇಟ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಭಾರತಿ ಸತ್ಯನಾರಾಯಣ‌ ʻಜಾಕಿ 42ʼ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಇದೊಂದು ಕಮರ್ಷಿಯಲ್ ಚಿತ್ರವಾಗಿದ್ದು ಹಾರ್ಸ್ ರೇಸ್ ಹಿನ್ನೆಲೆಯಲ್ಲಿ ಕಥೆ ಸಾಗಲಿದೆ. ...