ಭಾರತ, ಜೂನ್ 13 -- ಎನ್ ಚಲುವರಾಯ ಸ್ವಾಮಿ ಅರ್ಪಿಸುವ ಸ್ವರ್ಣಾಂಬಿಕ ಪಿಚ್ಚರ್ಸ್ ಬ್ಯಾನರ್ ನಡಿಯಲ್ಲಿ ಬಿ.ಕೆ ಧನಲಕ್ಷ್ಮೀ ನಿರ್ಮಾಣದ Barnswallow companyಯ ರಾಜವರ್ಧನ್ ಸಹ ನಿರ್ಮಾಣದ ಸಚಿನ್ ಚಲುವರಾಯ ಸ್ವಾಮಿ ಅಭಿನಯದ ಚಿತ್ರ ʻಕಮಲ್ ಶ್ರೀದೇವಿʼ. ಇದೀಗ ಇದೇ ಚಿತ್ರದಿಂದ ಮೊದಲ ಪೋಸ್ಟರ್‌ ಬಿಡುಗಡೆ ಆಗಿದೆ. ಕಿಶೋರ್, ರಮೇಶ್ ಇಂದಿರಾ, ಸಂಗೀತಾ ಭಟ್ ಸೇರಿ ಪ್ರತಿಭಾವಂತ ತಾರಾಬಳಗವಿರೋ ಈ ಚಿತ್ರವನ್ನ ವಿ.ಎ ಸುನೀಲ್ ಕುಮಾರ್ ನಿರ್ದೇಶಿಸಿದ್ದು, ಈ ಚಿತ್ರದ ಸಂಪೂರ್ಣ ಕ್ರಿಯೇಟಿವ್ ಜವಾಬ್ದಾರಿಯನ್ನ ಸಹ ನಿರ್ಮಾಪಕ ರಾಜವರ್ಧನ್ ಹೊತ್ತಿಕೊಂಡಿದ್ದಾರೆ.

ʻಕಮಲ್ ಶ್ರೀದೇವಿʼ ಅನ್ನೋ ಲೆಜಂಡರಿ ಜೋಡಿಯ ಹೆಸರಿಟ್ಟು, ಸಾಂಕೇತಿಕವಾಗಿ ಹಲವು ಆಯಾಮವನ್ನು ಸೂಚಿಸುವ ವಿಭಿನ್ನ ಪೋಸ್ಟರ್ ರಿಲೀಸ್ ಮಾಡಿರೋ ಚಿತ್ರತಂಡ, ಹಲವು ಪ್ರಶ್ನೆಗಳ‌ ಜೊತೆಗೆ ಕೌತುಕ ಹುಟ್ಟಿಸಿದೆ.‌ ಅಲ್ಲದೆ ಟೈಟಲ್ ಕೆಳಗೆ ಅಡಿ ಬರಹವಾಗಿ ಬರೆದಿರುವ ಕೇಸ್ ನಂಬರ್, ಇದು ನೈಜ ಘಟನೆಯನ್ನಾಧರಿಸಿದ ಸಿನಿಮಾನಾ..? ಒಂದು ಹೆಣ್ಣಿನ ತಲೆಯನ್ನ ಪಾರಿವಾಳಗಳಿಂದ ಡಿಸೈನ್ ಮಾಡಿ ಮೈಗೆ ಹ...