Bengaluru, ಏಪ್ರಿಲ್ 3 -- Ajay Rao: ಅಜೇಯ್‍ ರಾವ್‍ ಅಭಿನಯದ ಚಿತ್ರವೊಂದು ಬಿಡುಗಡೆಯಾಗಿ ಮೂರು ವರ್ಷಗಳೇ ಆಗಿವೆ. ಈ ಮಧ್ಯೆ, ಅವರು 'ಯುದ್ಧಕಾಂಡ' ಎಂಬ ಚಿತ್ರದಲ್ಲಿ ನಟಿಸುವುದರ ಜೊತೆಗೆ ನಿರ್ಮಾಣಕ್ಕೂ ಕೈ ಹಾಕಿದ್ದರು. ಆದರೆ, ಇತ್ತೀಚೆಗೆ ಚಿತ್ರದ ಸುದ್ದಿಯೇ ಇರಲಿಲ್ಲ. ಈಗ ಚಿತ್ರ ಕೊನೆಗೂ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದ್ದು, ಏಪ್ರಿಲ್‍ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು KVN ಪ್ರೊಡಕ್ಷನ್ಸ್ ಸಂಸ್ಥೆ ವಿತರಣೆ ಮಾಡುತ್ತಿದೆ.

ಈ ಚಿತ್ರ ಭಾರತದಾದ್ಯಂತ ಎಲ್ಲರಿಗೂ ತಲುಪಬೇಕು ಎನ್ನುವ ಅಜೇಯ್‍, 'ಇದು ತುಂಬಾ ದೊಡ್ಡ ಬಜೆಟ್‍ನ ಚಿತ್ರವೂ ಅಲ್ಲ, ತೀರಾ ಕಡಿಮೆ ಬಜೆಟ್‍ನ ಚಿತ್ರವೂ ಅಲ್ಲ. ನನ್ನ ಶಕ್ತಿ ಪ್ರಕಾರ, ಚೆನ್ನಾಗಿ ಮಾಡಿದ್ದೇನೆ. ಇದು ಭಾರತದಾದ್ಯಂತ ಸುದ್ದಿ ಮಾಡಬೇಕು ಎಂಬ ಹಠ ನನ್ನದು. ಮಲಯಾಳಂ, ತೆಲುಗಿನಲ್ಲಿ ಕಡಿಮೆ ಬಜೆಟ್‍ನಲ್ಲಿ ತಯಾರಾದ ಚಿತ್ರಗಳು ದೊಡ್ಡ ದಾಖಲೆ ಮಾಡಿವೆ. 100 ಕೋಟಿ ರೂ. ಗಳಿಕೆ ಮಾಡಿವೆ. ಇಲ್ಲಿ ಬಜೆಟ್‍ಗಿಂತ ಈ ವಿಷಯ ಎಲ್ಲರಿಗೂ ತಲುಪಬೇಕು. ಈ ಚಿತ್ರ ಎಲ್ಲರಿಗೂ ಮಾ...