Bengaluru, ಏಪ್ರಿಲ್ 26 -- ಭೂಲೋಕದ ಸ್ವರ್ಗ ಜಮ್ಮು ಕಾಶ್ಮೀರದಲ್ಲಿ ಮತ್ತೆ ಅಮಾಯಕರ ನೆತ್ತರು ಹರಿದಿದೆ. ಏಪ್ರಿಲ್‌ 22ರಂದು ಪಹಲ್ಗಾಮ್‌ ಧಾಮದಲ್ಲಿ ಏನೂ ಅರಿಯದೆ ತಮ್ಮ ಕುಟುಂಬ, ಆಪ್ತರ ಜತೆಗೆ ಖುಷಿಯ ಕ್ಷಣಗಳನ್ನು ಕಳೆಯುತ್ತಿದ್ದ ಜೀವಗಳನ್ನು ಇಬ್ಬರು ಬಂದೂಕುಧಾರಿಗಳು ಸರ್ವನಾಶ ಮಾಡಿದ್ದಾರೆ. ಏಕಾಏಕಿ ಗುಂಡಿನ ಮಳೆಗೆರೆದ ಉಗ್ರರು, ಒಟ್ಟು 26 ಜೀವಗಳನ್ನು ಬಲಿ ಪಡೆದಿದ್ದಾರೆ. ಕರ್ನಾಟಕದ ಮೂವರು ಈ ದಾಳಿಯಲ್ಲಿ ಅಸುನೀಗಿದ್ದಾರೆ. ದಾಳಿ ಬಳಿಯ ಇಡೀ ದೇಶ ಈ ಕೃತ್ಯಕ್ಕೆ ಕಂಬನಿ ಮಿಡಿದಿದೆ. ಉಗ್ರರನ್ನು ಸೆದೆಬಡಿಯುವಂತೆ ಕೇಂದ್ರ ಸರ್ಕಾರಕ್ಕೂ ಒತ್ತಾಯಿಸಿದೆ. ಈ ಬೆನ್ನಲ್ಲೇ ಇದೀಗ ಸೇನಾ ಕಾರ್ಯಾಚರಣೆಗಳು ಚುರುಕಿನ ಕೆಲಸ ಆರಂಭಿಸಿವೆ. ಇದೀಗ ಇದೇ ಕೃತ್ಯವನ್ನು ನಟಿ ರಮ್ಯಾ ಖಂಡಿಸಿದ್ದಾರೆ. ಈ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಶುಕ್ರವಾರ ಬೆಂಗಳೂರಿನಲ್ಲಿ ಆಭರಣ ಮಳಿಗೆಯೊಂದರ ಉದ್ಘಾಟನೆಗೆ ಬಂದಿದ್ದ ರಮ್ಯಾ, ಪಹಲ್ಗಾಮ್‌ ದಾಳಿ ಬಗ್ಗೆ ಮಾಧ್ಯಮಕ್ಕೆ ಮಾತನಾಡಿದ್ದಾರೆ. "ಟೆರರಿಸಂಗೆ ಧರ್ಮನೂ ಇರಲ್ಲ, ಮನುಷ...