Bengaluru, ಮಾರ್ಚ್ 24 -- Toxic Actor Yash: ಸ್ಯಾಂಡಲ್‌ವುಡ್‌ ನಟ, ರಾಕಿಂಗ್‌ ಸ್ಟಾರ್‌ ಯಶ್‌ ಸದ್ಯ ಪ್ಯಾನ್‌ ಇಂಡಿಯಾ ಮಾತ್ರವಲ್ಲ ಪ್ಯಾನ್‌ ವರ್ಲ್ಡ್‌ ಕನಸು ಕಂಡಿದ್ದಾರೆ. ಟಾಕ್ಸಿಕ್‌ ಸಿನಿಮಾ ಮೂಲಕ ಹಾಲಿವುಡ್‌ನತ್ತಲೂ ಚಿತ್ತ ನೆಟ್ಟಿದ್ದಾರೆ. ಕಳೆದ ಎರಡು ದಿನಗಳ ಹಿಂದಷ್ಟೇ ಟಾಕ್ಸಿಕ್‌ ಸಿನಿಮಾದ ಬಿಡುಗಡೆ ದಿನಾಂಕವೂ ಘೋಷಣೆ ಆಗಿದೆ. 2026 ಮಾರ್ಚ್‌ 19ರಂದು ಈ ಸಿನಿಮಾ ವಿಶ್ವದಾದ್ಯಂತ ರಿಲೀಸ್‌ ಆಗಲಿದೆ. ಇದೆಲ್ಲದರ ನಡುವೆಯೇ ಯೋಗರಾಜ್‌ ಭಟ್‌ ನಿರ್ದೇಶನದ ಮನದ ಕಡಲು ಸಿನಿಮಾ ಬಿಡುಗಡೆ ಪೂರ್ವ ಇವೆಂಟ್‌ನಲ್ಲಿ, ಚಿತ್ರದ ಟ್ರೇಲರ್‌ ಲಾಂಚ್‌ ಮಾಡಿದ ನಟ ಯಶ್‌, ಕಿರುತೆರೆ, ಎದುರಿಸಿದ ಒಂದಷ್ಟು ಅವಮಾನ, ಅದಾದ ಮೇಲೆ ಮೊಗ್ಗಿನ ಮನಸ್ಸು ಸಿನಿಮಾ ಚಾನ್ಸ್‌ ಸಿಕ್ಕಿದ್ದು.. ಹೀಗೆ ತಮ್ಮ ಆರಂಭದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.

"ಯಾವುದೋ ಒಂದು ಸಿನಿಮಾದಲ್ಲಿ ಅವಕಾಶ ಬಂತು. ಒಬ್ರು ಮ್ಯಾನೇಜರ್‌ ಹೇಳಿ ಕಳಿಸಿದ್ರು. ಶೂಟಿಂಗ್‌ನಲ್ಲಿ ಇದ್ದಿದ್ದರಿಂದ ಹೋಗೋಕೆ ಆಗಿರಲಿಲ್ಲ. ಒಂದು ದಿನ ಆದಮೇಲೆ ಹೋದೆ. ಕೆಳಗಡೆ ಪ್ರೊಡಕ್ಷ...