Bengaluru, ಮಾರ್ಚ್ 24 -- Yash about Kannada Film industry: 'ಒಬ್ಬ ವ್ಯಕ್ತಿ ತಾನಾಗೇ ಬೆಳೆದು ಬಿಡುವುದಿಲ್ಲ. ಅವರ ಸುತ್ತಮುತ್ತ ಸಾಕಷ್ಟು ಜನ ಪಿಲ್ಲರ್‌ಗಳಾಗಿ ನಿಂತು, ಬೆವರು ಹರಿಸಿ, ಇನ್ನೊಬ್ಬನನ್ನು ಮುಂದೆ ತಳ್ಳುತ್ತಾರೆ. ಹಾಗೆ ಮುಂದೆ ಬಂದವನು ನಾನು. ಅವರ ಸಹಕಾರದಿಂದ, ಜವಾಬ್ದಾರಿ ಇಟ್ಟುಕೊಂಡು ಇನ್ನೂ ಮುಂದಕ್ಕೆ ಸಾಗಿ, ಅವರು ಖುಷಿಪಡುವಂತಹ ಕೆಲಸ ಮಾಡಬೇಕು ಎಂದು ಗುರಿ ಇಟ್ಟುಕೊಂಡವನು ನಾನು .'

ಚಿತ್ರರಂಗಕ್ಕೆ ಬಂದ ಆರಂಭದ ದಿನಗಳಲ್ಲಿ ಆದ ಅವಮಾನಗಳ ಬಗ್ಗೆ ಯಶ್‍, ಯೋಗರಾಜ್‍ ಭಟ್‍ ನಿರ್ದೇಶನದ 'ಮನದ ಕಡಲು' ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ್ದು ಗೊತ್ತೇ ಇದೆ. ಅಷ್ಟೇ ಅಲ್ಲ, ಯಶ್‍ ಇನ್ನೂ ಹಲವು ವಿಷಯಗಳನ್ನು ಇದೇ ಸಂದರ್ಭದಲ್ಲಿ ಮಾತನಾಡಿದ್ದಾರೆ. ಚಿತ್ರರಂಗದಲ್ಲಿ ಬೆಳೆಯಬೇಕು ಎಂದರೆ ಇನ್ನೂ ಏನು ಮಾಡಬೇಕು ಎಂದು ಹೇಳಿಕೊಂಡಿದ್ದಾರೆ.

"ಮೊದಲು ನಮ್ಮ ಕೆಲಸವನ್ನು ಸರಿ ಮಾಡಬೇಕು ಎನ್ನುವ ಯಶ್‍, 'ಹಿಂದೆ ನಾನು ಸಹ ಜನ ಕನ್ನಡ ಚಿತ್ರಗಳನ್ನು ನೋಡುವುದಿಲ್ಲ, ನಮ್ಮ ಜನ ಬೇರೆ ಭಾಷೆ ಸಿನಿಮಾಗಳ...