Bengaluru, ಏಪ್ರಿಲ್ 20 -- ಸೌತ್‌ ಸಿನಿಮಾರಂಗದಲ್ಲಿ ಸ್ಟಾರ್‌ ಹೀರೋಗಳ ಸಿನಿಮಾಗಳಲ್ಲಿ ನಟಿಸುವ ಮೂಲಕ ಸ್ಟಾರ್‌ ನಟಿಯಾಗಿ ಗುರುತಿಸಿಕೊಂಡಿದ್ದಾರೆ ನಟಿ ಮಾಳವಿಕಾ ಮೋಹನನ್. ʻನಾನು ಮತ್ತು ವರಲಕ್ಷ್ಮೀʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟು, ತೆಲುಗು, ತಮಿಳು, ಮಲಯಾಳಂ, ಹಿಂದಿಯಲ್ಲಿಯೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಇದೇ ನಟಿ ದಕ್ಷಿಣ ಸಿನಿಮಾ ಮೇಕರ್‌ಗಳ ಹೊಕ್ಕಳು ಗೀಳಿನ ಬಗ್ಗೆ ಓಪನ್‌ ಆಗಿಯೇ ಮಾತನಾಡಿದ್ದಾರೆ.

ತಮಿಳಿನಲ್ಲಿ ʻಮಾಸ್ಟರ್ʼ ಚಿತ್ರದಲ್ಲಿ ನಟಿಸಿ ಸ್ಟಾರ್‌ ಪಟ್ಟ ಪಡೆದ ಮಾಳವಿಕಾ ಮೋಹನನ್, ರಜನಿಕಾಂತ್ ನಟನೆಯ ʻಪೆಟ್ಟಾʼ, ಧನುಷ್ ಅವರ ʻಮಾರನ್ʼ, ಚಿಯಾನ್‌ ವಿಕ್ರಂ ನಟನೆಯ ತಂಗಳಾನ್ ಚಿತ್ರಗಳಲ್ಲಿ ತಮ್ಮ ನಟನೆ ಮೂಲಕವೇ ಅಭಿಮಾನಿಗಳನ್ನು ಸೆಳೆದಿದ್ದಾರೆ. ಈಗ ಪ್ರಭಾಸ್ ನಾಯಕನಾಗಿ ನಟಿಸುತ್ತಿರುವ ಪ್ಯಾನ್‌ ಇಂಡಿಯನ್‌ ʻರಾಜಾ ಸಾಬ್ʼ ಚಿತ್ರದಲ್ಲಿಯೂ ನಾಯಕಿಯಾಗಿ ನಟಿಸುತ್ತಿದ್ದಾರೆ.

ದಕ್ಷಿಣ ಚಿತ್ರರಂಗದಲ್ಲಿ ನಾಯಕಿಯರ ಸೊಂಟ ಮತ್ತು ಹೊಕ್ಕುಳನ್ನೇ ಹೆಚ್ಚಾಗಿ ತೋರಿಸುತ್ತಾರೆ. ಆ ಭಾಗದ ...