Bengaluru, ಮಾರ್ಚ್ 21 -- Rajesh Natarang on Yash: ಸ್ಯಾಂಡಲ್‌ವುಡ್‌ ರಾಕಿಂಗ್‌ ಸ್ಟಾರ್‌ ಯಶ್‌, ಕೇವಲ ಪ್ಯಾನ್‌ ಇಂಡಿಯನ್‌ ಹೀರೋ ಅಲ್ಲ, ಪ್ಯಾನ್‌ ವರ್ಲ್ಡ್‌ ಹೀರೋ ಆಗಲು ಹೊರಟಿದ್ದಾರೆ. ಆ ನಿಟ್ಟಿನಲ್ಲಿ ಟಾಕ್ಸಿಕ್‌ ಸಿನಿಮಾ ಮೂಡಿಬರುತ್ತಿದೆ. ಈಗಾಗಲೇ ಬಿಡುಗಡೆ ಆಗಿರುವ ಚಿತ್ರದ ಸಣ್ಣ ಸಣ್ಣ ಝಲಕ್‌ಗಳು, ಬೆರಗು ಮೂಡಿಸಿವೆ. ಭಾರತದ ಕಲಾವಿದರು ಮಾತ್ರವಲ್ಲದೆ, ಹಾಲಿವುಡ್‌ನಲ್ಲಿ ಗುರುತಿಸಿಕೊಂಡ ಎಷ್ಟೋ ನಟರು ಟಾಕ್ಸಿಕ್‌ ಸಿನಿಮಾದ ಭಾಗವಾಗಿದ್ದಾರೆ. ಈ ಮೂಲಕ ಕನ್ನಡದ ಸಿನಿಮಾವೊಂದನ್ನು ಬೇರೆ ರೇಂಜ್‌ನಲ್ಲಿಯೇ ಕಟ್ಟಿಕೊಡುತ್ತಿದ್ದಾರೆ ನಿರ್ದೇಶಕಿ ಗೀತು ಮೋಹನ್‌ ದಾಸ್. ‌ಇಂತಿಪ್ಪ ಯಶ್‌ಗೆ ಸದ್ಯ ಅಮೃತಧಾರೆ ಸೀರಿಯಲ್‌ನಲ್ಲಿ ನಟಿಸುತ್ತಿರುವ ಗೌತಮ್‌ ದಿವಾನ್‌ ಅಲಿಯಾಸ್ ರಾಜೇಶ್‌ ನಟರಂಗ ತುಂಬ ಆಪ್ತರು.

ಸೀರಿಯಲ್‌ ಆರಂಭದ ದಿನಗಳಲ್ಲಿ ರಾಜೇಶ್‌ ನಟರಂಗ ಸೀನಿಯರ್‌ ಕಲಾವಿದರಾಗಿದ್ದರೆ, ಅವರ ಜತೆಗೆ ಆಗಿನ್ನೂ ಬಣ್ಣದ ಲೋಕಕ್ಕೆ ಬಂದು ಕೆಲಸ ಆರಂಭಿಸಿದ್ದವರು ಯಶ್‌. ಅಂದಿನಿಂದ ಬೆಳೆದ ಆ ಸ್ನೇಹ ಸಂಬಂಧ ಇಂದಿಗೂ ಹಾಗೇ ಹಸಿರಾ...