ಭಾರತ, ಜೂನ್ 28 -- ವಂಚನೆ ಹಿನ್ನೆಲೆಯಲ್ಲಿ ಸಾಕಷ್ಟು ಸಿನಿಮಾಗಳು ಬೆಳ್ಳಿತೆರೆ ಮೇಲೆ ಮೂಡಿಬಂದ ಉದಾಹರಣೆಗಳಿವೆ. ಕೆಲವೊಂದಿಷ್ಟು ನೈಜ ಘಟನೆಗಳನ್ನೇ ಆಧರಿಸಿ ನೋಡುಗರನ್ನು ಕುತೂಹಲಕ್ಕೆ ದೂಡಿದ್ದೂ ಉಂಟು. ಇದೀಗ ಅಂಥದ್ದೇ ಫ್ರಾಡ್‌ ಕಥೆಯೊಂದರ ಜಾಡಿನಲ್ಲಿ ಮೂಡಿಬಂದಿದೆ ʻಅವನಿರಬೇಕಿತ್ತುʼ ಅನ್ನೋ ಸಿನಿಮಾ. ಅಶೋಕ್‌ ಸಾಮ್ರಾಟ್‌ ಎಂಬ ಯುವ ನಿರ್ದೇಶಕ ಈ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಇದು ಇವರ ಚೊಚ್ಚಲ ಸಿನಿಮಾ. ಶುಕ್ರವಾರ (ಜೂ 28) ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಹೀಗಿದೆ ಈ ಚಿತ್ರದ ವಿಮರ್ಶೆ.

ಕಾಲಘಟ್ಟ ಬದಲಾದಂತೆ, ಮನುಷ್ಯ ತನ್ನ ಕೆಲಸವನ್ನು ಸಲೀಸು ಮಾಡಿಕೊಳ್ಳಲು ತಂತ್ರಜ್ಞಾನದ ಮೂಲಕ ಸಾಕಷ್ಟು ಆವಿಷ್ಕಾರಗಳಿಗೆ ನಾಂದಿ ಹಾಡಿದ್ದಾನೆ. ಅದರಲ್ಲೂ ಆನ್‌ಲೈನ್‌ ವ್ಯವಹಾರ ಸದ್ಯ ಈ ಜಗತ್ತಿನ್ನು ಆಳುತ್ತಿದೆ. ಎಲ್ಲವೂ ಡಿಜಿಟಲೀಕರಣವಾಗಿದೆ. ಅದೇ ರೀತಿ ಟೆಕ್ನಾಲಜಿ ಬೆಳದಂತೆ, ಮೋಸದ ಜಾಲವೂ ಅದೇ ಆನ್‌ಲೈನ್‌ನಲ್ಲಿ ಹುಟ್ಟಿಕೊಂಡಿದೆ. ಬಲೆಗೆ ಬಿದ್ದಿದ್ದೇ ತಡ ಲಕ್ಷ ಲಕ್ಷ ಹಣವನ್ನು ಕ್ಷಣಾರ್ಧದಲ್ಲಿ ಎಗರಿಸಿ ಮಂಗಮಾಯವಾ...