ಭಾರತ, ಜೂನ್ 21 -- ಅವನಿರಬೇಕಿತ್ತು... ಕನ್ನಡ ಚಿತ್ರರಂಗಕ್ಕೆ ಅಚ್ಚರಿಯಾಗಿ ಕಾಣ್ತಿರೋ ಹೊಸಬರ ಹೊಸ ಬಗೆಯ ಸಿನಿಮಾ. ಅಂದಕಾಲತ್ತಿಲ್.. ಇಂದ ಕಾಲತ್ತಿಲ್ ಹಾಡಿನಿಂದ ಗಮನ ಸೆಳೆದಿದ್ದ ಅವನಿರಬೇಕಿತ್ತು.. ಓ ಹೃದಯ ಅನ್ನೋ ಹಾಡಿನಿಂದ ಮತ್ತೊಂದು ಪಟ್ಟು ಭರವಸೆಯನ್ನ ಹೆಚ್ಚಿಸಿತ್ತು. ಈ ನಡುವೆ ಟ್ರೈಲರ್ ರಿಲೀಸ್ ಮಾಡಿ, ಇಡೀ ಉದ್ಯಮಕ್ಕೆ ಮೆರಗು ತರೋ ಸೂಚನೆ ನೀಡಿದೆ ಚಿತ್ರತಂಡ. ಅದಕ್ಕೆ ಸಾಕ್ಷಿ ಎಂಬಂತೆ ಆರ್ಗ್ಯಾನಿಕ್ ಆಗಿ ಸೋಷಿಯಲ್ ಮಿಡಿಯಾದಲ್ಲಿ ಈ ಚಿತ್ರದ ಟ್ರೈಲರ್ ಹಾಗೂ ಹಾಡುಗಳಿಗೆ ಅಪ್ಪಟ ಕನ್ನಡ ಸಿನಿಪ್ರಿಯರಿಂದ ಪ್ರಶಂಸೆಗಳು ವ್ಯಕ್ತವಾಗ್ತಿವೆ.

ಕನ್ನಡ ಚಿತ್ರರಂಗದಲ್ಲಿ ಹಲವು ಚಿತ್ರಗಳಿಗೆ ಕೆಲಸ ಮಾಡಿದ ಅನುಭವವಿರೋ ಬಹುಮುಖ ಪ್ರತಿಭೆ ಅಶೋಕ್ ಸಾಮ್ರಾಟ್ ನಿರ್ದೇಶನದ ಚೊಚ್ಚಲ ಸಿನಿಮಾ ಅವನಿರಬೇಕಿತ್ತು.. ಗೆಳೆಯ ಮುರಳಿ ಬಿಟಿ ಅಶೋಕ್ ಸಿನಿಮಾ ಕನಸಿಗೆ ಬಂಡವಾಳ ಹೂಡಿದ್ದಾರೆ. ಹಂಸಲೇಖ ಶಿಷ್ಯ ಲೋಕಿ ತವಸ್ಯಾ ಸಂಗೀತ ಸಂಯೋಜಿಸಿದ್ದು, ದೇವರಾಜ್ ಪೂಜಾರಿ ಛಾಯಾಗ್ರಹಣ ಮಾಡಿದ್ದಾರೆ. ತಾಂತ್ರಿಕವಾಗಿ ನಿಪುಣರ ತಂಡವನ್ನ ಕಟ್ಟಿಕೊಂಡು,...