Bengaluru, ಏಪ್ರಿಲ್ 29 -- ಸ್ಯಾಂಡಲ್‌ವುಡ್‌ನ ಪವರ್‌ಸ್ಟಾರ್‌, ಕರ್ನಾಟಕ ರತ್ನ ಪುನೀತ್‌ ರಾಜ್‌ಕುಮಾರ್‌ ಇಲ್ಲವಾಗಿ ಮೂರೂವರೆ ವರ್ಷಗಳಾಗುತ್ತ ಬಂತು. ಇಂದಿಗೂ ಅವರಿಲ್ಲ ಅನ್ನೋ ಭಾವ ಕರುನಾಡಿನ ಜನರಲ್ಲಿ ಮೂಡಿಲ್ಲ. ಒಂದಿಲ್ಲ ಒಂದು ರೀತಿ ನಿತ್ಯ ಅಪ್ಪು ಅವರ ದರ್ಶನವಾಗುತ್ತಲೇ ಇರುತ್ತದೆ. ಪುನೀತ್‌ ಅವರನ್ನು ಅವರ ಸಿನಿಮಾಗಳ ರೂಪದಲ್ಲಿ, ಹಾಡು, ಡೈಲಾಗ್‌ಗಳ ರೂಪದಲ್ಲಿ ನಿತ್ಯ ನೆನೆಯುತ್ತಲೇ ಇದ್ದಾರೆ. ಇದೀಗ ಇದೇ ಪುನೀತ್‌ ರಾಜ್‌ಕುಮಾರ್‌ ಹಿರಿಯ ಮಗಳು ಧೃತಿ ಬರ್ತ್‌ಡೇ ಖುಷಿಯಲ್ಲಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಖುಷಿಯನ್ನು ಹಂಚಿಕೊಂಡಿದ್ದೇ ತಡ, ಅಪ್ಪು ಅಭಿಮಾನಿಗಳಿಂದ ಸಾಲು ಸಾಲು ಶುಭಾಶಯ ಸಂದೇಶಗಳು ರವಾನೆಯಾಗುತ್ತಿವೆ.

ಪುನೀತ್‌ ರಾಜ್‌ಕುಮಾರ್‌ ಮತ್ತು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು. ಹಿರಿ ಮಗಳು ಧೃತಿ, ಕಿರಿ ಮಗಳು ವಂದಿತಾ. ಸ್ಟಾರ್‌ ನಟನ ಮಕ್ಕಳಾದರೂ, ತಾವಾಯ್ತು ತಮ್ಮ ಕೆಲಸವಾಯ್ತು ಎಂದಷ್ಟೇ ಇದ್ದಾರೆ ಪುನೀತ್‌ ಮಕ್ಕಳು. ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದೂ ಅತ್ಯಾಪರ...