Bengaluru, ಏಪ್ರಿಲ್ 21 -- ಸ್ಯಾಂಡಲ್‌ವುಡ್‌ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಪ್ರಸಕ್ತ ವಿದ್ಯಮಾನಗಳ ಬಗ್ಗೆ ರಾಜಕೀಯ ವಿಚಾರಗಳ ಬಗ್ಗೆ, ಸಿನಿಮಾ ಆಗು ಹೋಗುಗಳ ಬಗ್ಗೆ ತಮ್ಮ ವೈಯಕ್ತಿಕ ಅನಿಸಿಕೆ ಅಭಿಪ್ರಾಯಗಳನ್ನು ಹೇಳಿಕೊಳ್ಳುತ್ತಲೇ ಇರುತ್ತಾರೆ. ಇದೀಗ, ಸದ್ಯ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲಕ್ಕೆ ಕಾರಣವಾಗಿರುವ ಜಾತಿ ಗಣತಿ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಜಾತಿ ಗಣತಿ ಬಗ್ಗೆ ನಡೆದ ಚರ್ಚೆಯ ಬಗ್ಗೆ ನಿತ್ಯ ಒಂದಿಲ್ಲೊಂದು ಪೋಸ್ಟ್‌ ಹಂಚಿಕೊಳ್ಳುತ್ತಲೇ ಬಂದಿದ್ದಾರೆ ಚೇತನ್‌ ಅಹಿಂಸಾ. ಇಲ್ಲಿವೆ ಅವರ ಹಲವು ಅನಿಸಿಕೆ ಅಭಿಪ್ರಾಯದ ಪೋಸ್ಟ್‌ಗಳು.

ಈ ಸಂಬಂಧ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಸರಣಿ ಪೋಸ್ಟ್‌ಗಳನ್ನು ಹಂಚಿಕೊಂಡಿರುವ ಚೇತನ್‌ ಅಹಿಂಸಾ, "ಕರ್ನಾಟಕದ ಜಾತಿ ಜನಗಣತಿಯು ಕುರುಬ ಸಮುದಾಯವು ರಾಜ್ಯದ ಅತ್ಯಂತ ಹಿಂದುಳಿದ ಗುಂಪುಗಳಲ್ಲಿ ಒಂದಾಗಿದೆ - ಅಲೆಮಾರಿಗಳಿಗಿಂತಲೂ ಹೆಚ್ಚು ಹಿಂದುಳಿದಿದೆ ಎಂದು ತೋರಿಸುತ್ತದೆ. ಇದು ಇಂದಿನ ವಾಸ್ತವವೇ ಅಥವಾ ಅಧಿಕಾರದಲ್ಲಿರು...