Bengaluru, ಏಪ್ರಿಲ್ 26 -- ಬೆಂಗಳೂರು: ಭಾರತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲೂ ಮತದಾನದ ಸಮಯ. ಎರಡು ಹಂತಗಳಲ್ಲಿ ಚುನಾವಣೆ ವೇಳಾಪಟ್ಟಿಯನ್ನು ಈಗಾಗಲೇ ಚುನಾವಣಾ ಆಯೋಗ ಪ್ರಕಟಿಸಿದ್ದು, ಅದರಂತೆ ಮೊದಲ ಹಂತದಲ್ಲಿ ಬೆಂಗಳೂರು ನಗರವೂ ಸೇರಿದಂತೆ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಶುಕ್ರವಾರ ಬೆಳಿಗ್ಗೆ7 ರಿಂದ ಸಂಜೆ 6ವರೆಗೂ ಇರಲಿದೆ. ಬೆಂಗಳೂರು ನಗರದ ದಕ್ಷಿಣ, ಉತ್ತರ,ಕೇಂದ್ರ ಹಾಗೂ ಗ್ರಾಮೀಣ, ಚಿಕ್ಕಬಳ್ಳಾಪುರ. ಕೋಲಾರ, ತುಮಕೂರು, ಚಿತ್ರದುರ್ಗ, ಉಡುಪಿ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಒಟ್ಟು 2.88 ಕೋಟಿಯಷ್ಟು ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಈಗಾಗಲೇ ಮತದಾನಕ್ಕಾಗಿ ಚುನಾವಣೆ ಸಿಬ್ಬಂದಿ ಗುರುವಾರ ಸಂಜೆಯೇ ಆಯಾ ಮತಗಟ್ಟೆಗೆ ತೆರಳಿ ಸಿದ್ದತೆ ಮುಗಿಸಿಕೊಂಡರು.

ಮೈಸೂರುಕೊಡಗು ಕ್ಷೇತ್ರದಲ್ಲಿ18 ಅಭ್ಯರ್ಥಿಗಳು, ಚಾಮರಾಜನಗರ (ಎಸ್ ಸಿ) ಕ್ಷೇತ್ರದಲ್ಲಿ14, ಮಂಡ್ಯದಲ್ಲಿ14 , ಉಡುಪಿ ಚಿಕ್ಕಮಗಳೂರು ಕ್ಷೇತ್ರ...