ಭಾರತ, ಜನವರಿ 3 -- Facebook Post: ಕರ್ನಾಟಕದಲ್ಲಿ ಹೆಣ್ಣುಮಕ್ಕಳ ಸಂಖ್ಯೆ ತೀವ್ರ ಇಳಿಮುಖವಾಗುತ್ತಿದೆ ಎನ್ನುವುದು ವರ್ಷದ ಕೊನೆಗೆ ವಿಧಾನ ಸಭೆ ಅಧಿವೇಶನದಲ್ಲಿ ಮಂಡಿಸಲಾದ ವರದಿಯೊಂದರಲ್ಲಿ ಬಯಲಾದ ಸತ್ಯ. 2021 ರಲ್ಲಿ ಗಂಡು-ಹೆಣ್ಣಿನ ಜನಸಂಖ್ಯೆಯ ಅನುಪಾತ 1000- 947 ಇತ್ತು. ಅಂದರೆ ಸಾವಿರ ಗಂಡಿಗೆ 947 ಹೆಣ್ಣು. 2022 ರಲ್ಲಿ ಈ ಅನುಪಾತ 1000 - 929 ಕ್ಕೆ ಕುಸಿದಿದೆ! ಅಂದರೆ 1000 ಗಂಡಸರಿಗೆ 929 ಮಹಿಳೆಯರು!

ಕರ್ನಾಟಕದ ಜನಸಂಖ್ಯೆ ಆರೂವರೆ ಕೋಟಿ ಎಂದು ಲೆಕ್ಕ ಹಾಕಿದರೆ, ಒಟ್ಟು ಜನಸಂಖ್ಯೆಯಲ್ಲಿ ಗಂಡಸರಿಗಿಂತ 46.15 ಲಕ್ಷ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಇದೆ! 46.15 ಲಕ್ಷ ಗಂಡಸರು, ಕರ್ನಾಟಕದವರನ್ನೇ ಮದುವೆ ಆಗಬೇಕು ಎಂದರೆ ಸಾಧ್ಯವಿಲ್ಲ. ಹೊರ ರಾಜ್ಯದವರನ್ನು ಹುಡುಕಬೇಕು. ಅಂತರರಾಜ್ಯ ಮತ್ತು ಅಂತರದೇಶೀಯ ಮದುವೆಗಳು ಹೆಚ್ಚಾಗಬೇಕು. ಭಾರತದ ಜನಸಂಖ್ಯೆಯಲ್ಲಿ ಗಂಡು ಮತ್ತು ಹೆಣ್ಣಿನ ಅನುಪಾತ 2022-23 ರಲ್ಲಿ 1000 ಗಂಡಿಗೆ 933 ಹೆಣ್ಣು ಎಂದು ದಾಖಲಾಗಿದೆ. ಅಂದರೆ ಅಲ್ಲೂ 1000 ಗಂಡಸರಿಗೆ 67 ಹೆಣ್ಣುಮಕ್ಕಳ ಕೊರತೆ ...