ಭಾರತ, ಮೇ 9 -- ಮಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಉಡುಪಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದರೆ, ಎರಡನೇ ಸ್ಥಾನವನ್ನು ದಕ್ಷಿಣ ಕನ್ನಡ ಜಿಲ್ಲೆ ಪಡೆದುಕೊಂಡಿದೆ. ಉಡುಪಿ ಜಿಲ್ಲೆ ಶೇ 94 ಫಲಿತಾಂಶ ದಾಖಲಿಸಿದರೆ, ದಕ್ಷಿಣ ಕನ್ನಡ ಜಿಲ್ಲೆ ಶೇ 92.12 ಫಲಿತಾಂಶ ದಾಖಲಿಸಿ ಎರಡನೇ ಸ್ಥಾನದಲ್ಲಿದೆ. ಉತ್ತರ ಕನ್ನಡ 86.54 ಫಲಿತಾಂಶ ದಾಖಲಿಸಿ ನಾಲ್ಕನೇ ಸ್ಥಾನ ಪಡೆದಿದ್ದು, ಈ ಬಾರಿ ಭಾರೀ ಜಿಗಿತ ಕಂಡಿದೆ.

ಕಳೆದ ಸಾಲಿನ ಫಲಿತಾಂಶಕ್ಕೆ ಹೋಲಿಸಿದರೆ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಭಾರೀ ಪ್ರಗತಿಯನ್ನು ಕಂಡಿವೆ. ಕಳೆದ ಬಾರಿ ಅಂದರೆ, 2023ರಲ್ಲಿ ಎಸ್ಸೆಸ್ಸೆಲ್ಸಿಯ ಪರೀಕ್ಷೆಯ ಫಲಿತಾಂಶ ನೋಡಿದಾಗ, ಶೈಕ್ಷಣಿಕ ಹಬ್ ಎನಿಸಿಕೊಳ್ಳುವ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳು ರಾಜ್ಯದಲ್ಲಿ 14 ಮತ್ತು 17ನೇ ಸ್ಥಾನಿಯಾಗಿದ್ದವು. 2022ರಲ್ಲಿ ದಕ್ಷಿಣ ಕನ್ನಡ 20ನೇ ಸ್ಥಾನಿಯಾಗಿದ್ದರೆ, ಉಡುಪಿ 12ನೇ ಸ್ಥಾನ ಪಡೆದಿತ್ತು. ಕಳೆದ ಮೂರು ವರ್ಷಗಳೂ ಶೇ 88ರಿಂದ 89ರ ಫಲಿತಾಂಶಗಳು ಉಭಯ ಜಿಲ್ಲೆಗಳಿಗೆ ದ...