ಭಾರತ, ಏಪ್ರಿಲ್ 28 -- ಬೆಂಗಳೂರು: ಸಹಜ ಕ್ರಿಯೆಗಳು ಗೀಳಾಗಿ ಬದಲಾದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪೋಷಕರು ಮತ್ತು ಹಿರಿಯರು ಹದಿಹರೆಯದ ಮಕ್ಕಳೊಂದಿಗೆ ನಿಯಮಿತವಾಗಿ ಮಾತನಾಡಬೇಕು. ಆಗ ಮುಂದೆ ಎದುರಾಗುವ ಹಲವು ಸಮಸ್ಯೆಗಳಿಗೆ ಮೊದಲೇ ಪರಿಹಾರ ಕಂಡುಕೊಳ್ಳಬಹುದು. ಸಂವಹನದ ಕೊರತೆಯು ಹದಿಹರೆಯದವರಲ್ಲಿ ಮುಷ್ಟಿ, ಹಸ್ತ ಮೈಥುತನದಂತಹ ಅಭ್ಯಾಸಗಳಿಗೆ ಕಾರಣವಾಗಬಹುದು. ಇತ್ತೀಚೆಗೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪ್ರಕಟವಾಗಿದ್ದ ಹುಡುಗಿ ಹಸ್ತ ಮೈಥುನ, ಆಕೆಯಲ್ಲಿನ ಬದಲಾಣೆಗಳ ಬಗ್ಗೆ ಗಿರಿಜಾ ಹೆಗಡೆ ಅವರ ಲೇಖನಕ್ಕೆ ಸಂಬಂಧಿಸಿದಂತೆ ಕೌನ್ಸೆಲಿಂಗ್ ತಜ್ಞರಾದ ಡಾ ರೂಪಾ ರಾವ್ ಪ್ರತಿಕ್ರಿಯಿಸಿದ್ದಾರೆ. ಈ ಪೋಸ್ಟ್‌ನ ವಿವರ ಹೀಗಿದೆ.

ಮುಷ್ಟಿ ಮೈಥುನ ಗಂಡು‌ಮಕ್ಕಳಲ್ಲಿ ಮತ್ತು ಹಸ್ತ ಮೈಥುನ ಹೆಣ್ಣು ಮಕ್ಕಳಲ್ಲಿ ಸಾಮಾನ್ಯವಾಗಿ ಹದಿಹರೆಯ ಅಥವಾ ಅದಕ್ಕಿಂತ ಮುಂಚಿನ ಸಮಯದಲ್ಲಿ ಕಾಣಿಸಿಕೊಳ್ಳುವ ಅಭ್ಯಾಸ. ಅವರವರ ಲೈಂಗಿಕ ಅಗತ್ಯಕ್ಕೆ ತಕ್ಕಂತೆ ಕೆಲವರು ಬಹಳ‌ಸಲ ಈ ಕ್ರಿಯೆಯಲ್ಲಿ ಕೆಲವರು ಕಡಿಮೆ ಸಮಯಗಳಲ್ಲಿ ತೊಡಗಿಕ...