Bangalore, ಏಪ್ರಿಲ್ 29 -- ಬೆಂಗಳೂರು: ಹಿಂದೊಮ್ಮೆ ಜಿಯೋ ಸಿಮ್‌ ಬಂದ ಬಳಿಕ ಇಂಟರ್‌ನೆಟ್‌ ದರವೆಲ್ಲ ಅಗ್ಗವಾದ ಸಂಗತಿ ನಿಮಗೆ ನೆನಪಿರಬಹುದು. ಇದೀಗ ದುಬಾರಿ ಒಟಿಟಿ ಮಾರುಕಟ್ಟೆಯಲ್ಲೂ ಜಿಯೋ ಹೊಸ ದರ ಸಮರಕ್ಕೆ ನಾಂದಿಹಾಡಲಿದೆಯೇ? ಜಿಯೋಸಿನಿಮಾ ಪರಿಚಯಿಸಿದ ಹೊಸ ಪ್ಲ್ಯಾನ್‌ ನೋಡಿದರೆ ಇಂತಹ ಸಾಧ್ಯತೆ ನಿಚ್ಚಳವಾಗಿದೆ. ತಿಂಗಳಿಗೆ ಒಂದು ಡಿವೈಸ್‌ಗೆ 29 ರೂಪಾಯಿ ಮತ್ತು 4 ಡಿವೈಸ್‌ಗೆ 89 ರೂಪಾಯಿಯ ಹೊಸ ಪ್ರೀಮಿಯಂ ಪ್ಲ್ಯಾನ್‌ ಅನ್ನು ಜಿಯೋ ಸಿನಿಮಾ ಪರಿಚಯಿಸಿದೆ. ಈಗ ಬಹುತೇಕ ಒಟಿಟಿ ಪ್ರೀಮಿಯಂ ಪ್ಲ್ಯಾನ್‌ಗಳು 100 ರೂಪಾಯಿಗಿಂತ ಹೆಚ್ಚಿವೆ. ಟಿವಿ ಇತ್ಯಾದಿಗಳಲ್ಲಿ ಎಚ್‌ಡಿ ವಿಡಿಯೋ ನೋಡಬೇಕಾದರೆ ವರ್ಷಕ್ಕೆ 1500ರವರೆಗೆ ಪಾವತಿಸಬೇಕಿದೆ. ಇದೀಗ ತಿಂಗಳಿಗೆ 29 ರೂಪಾಯಿಯ ಆಫರ್‌ ನೀಡುವ ಮೂಲಕ ಜಿಯೋ ಹೊಸ ದರ ಸಮರಕ್ಕೆ ಮುನ್ನುಡಿ ಬರೆಯಲು ಹೊರಟಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ಪ್ರಶಸ್ತಿ ಪುರಸ್ಕೃತ ಸಿನಿಮಾಗಳ ಕೊಡುಗೆಯ ಬಳಿಕ ಜಿಯೋ ಸಿನಿಮಾ ಹೆಚ್ಚು ಜನರಿಗೆ ತಲುಪಿದೆ. ಇದೀಗ ಒಟಿಟಿಗಳಲ್ಲಿ ಡಿವೈಸ್‌ ನಿರ್ಬಂದಗಳು, ಕಡಿಮೆ...