Bengaluru, ಏಪ್ರಿಲ್ 29 -- ಸಂಖ್ಯಾಶಾಸ್ತ್ರ: 17ನೇ ದಿನಾಂಕದಲ್ಲಿ ಹುಟ್ಟಿದ ಜನರಲ್ಲಿ ವಿಶೇಷ ಆತ್ಮವಿಶ್ವಾಸವಿರುತ್ತದೆ. ಆತ್ಮಸ್ಥೈರ್ಯದಿಂದ ಯಾವುದೇ ಕಠಿಣವಾದ ಕೆಲಸವನ್ನು ಮಾಡಬಲ್ಲವರಾಗಿರುತ್ತಾರೆ. ಆದರೆ ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಅಡಚಣೆ ಉಂಟಾದಲ್ಲಿ ಮನದಲ್ಲಿ ವೈರಾಗ್ಯ ಭಾವನೆ ಮೂಡುತ್ತದೆ.

ಆತ್ಮೀಯರಿಂದ ಸಹಾಯ ಸಹಕಾರ ದೊರೆಯುತ್ತದೆ. ತಡವಾದರೂ ಕೆಲಸ ಕಾರ್ಯಗಳು ಪೂರ್ಣಗೊಳಿಸುತ್ತಾರೆ. ಬಿಡುವಿನ ವೇಳೆಯಲ್ಲಿ ಕೆಲಸ ಕಾರ್ಯಗಳನ್ನು ಮಾಡುವುದಿಲ್ಲ. ಕೆಲಸ ಕಾರ್ಯದ ಒತ್ತಡ ಹೆಚ್ಚಾದ ವೇಳೆಯಲ್ಲಿ ಜ್ಞಾನೋದಯವಾಗುತ್ತದೆ. ಇವರಲ್ಲಿನ ವಿಶೇಷತೆ ಎಂದರೆ ವಯಸ್ಸಿನ ತಾರತಮ್ಯ ತೋರದೆ ಎಲ್ಲರೊಂದಿಗೆ ಸ್ನೇಹದಿಂದ ವರ್ತಿಸುತ್ತಾರೆ. ಆದ್ದರಿಂದ ಇವರಿಗೆ ಸಹಾಯ ಮಾಡಲು ಜನರಿಗೆ ಕೊರತೆ ಇರುವುದಿಲ್ಲ.

ಅವಶ್ಯಕವಾದ ವಿಚಾರಗಳನ್ನುಸಂಗ್ರಹಿಸುವುದು, ಮನಸ್ಸಿಗೆ ಒಪ್ಪುವ ವಸ್ತುಗಳನ್ನು ಸಂಗ್ರಹಿಸುವುದು, ಇಷ್ಟವೆನಿಸುವ ವಸ್ತುಗಳನ್ನು ಖರೀದಿಸುವುದು ಇವರ ಹವ್ಯಾಸ. ಇವರಲ್ಲಿ ಸ್ವಾರ್ಥದ ಮನೋಭಾವನೆ ಇರುವುದಿಲ್ಲ. ತಮ್ಮಲ್ಲಿರುವ ವಸ್ತುಗಳನ್ನು ...