Bangalore, ಮೇ 12 -- ಬೆಂಗಳೂರು: ಹಕ್ಕಿಗಳಿಗೂ ಒಂದು ದಿನವುಂಟು. ಅಷ್ಟೇ ಅಲ್ಲ. ಹೊರ ದೇಶ, ರಾಜ್ಯಗಳಿಂದ ಬರುವ ವಲಸೆ ಹಕ್ಕಿಗಳಿಗೂ ವಿಶೇಷ ದಿನವುಂಟು. ಆದರೆ ವಲಸೆ ಹಕ್ಕಿಗಳಿಗೆ ವರ್ಷದಲ್ಲಿ ಎರಡು ದಿನ ವಿಶೇಷ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.ಪ್ರತಿ ವರ್ಷ ಮೇ ಮತ್ತು ಅಕ್ಟೋಬರ್ ತಿಂಗಳ ಎರಡನೇ ಶನಿವಾರಗಳನ್ನು ವಿಶ್ವ ವಲಸೆ ಹಕ್ಕಿಗಳ ದಿನ( World Migratory Bird Day) ವನ್ನಾಗಿ ಆಚರಿಸಲಾಗುತ್ತದೆ. ಹಕ್ಕಿಗಳ ವಲಸೆ ಪರಿಸರ ವ್ಯವಸ್ಥೆಯ ಒಂದು ಅತ್ಯಂತ ಸೋಜಿಗದ, ಆದರೆ ಜೀವವೈವಿಧ್ಯ, ಪರಿಸರ ಸಮತೋಲನದ ದೃಷ್ಟಿಯಿಂದ ಅತ್ಯಂತ ಮಹತ್ವದ ವಿಷಯ. 2024ನೇ ಸಾಲಿನ ವಿಶ್ವ ವಲಸೆ ಹಕ್ಕಿಗಳ ದಿನದ ಘೋಷವಾಕ್ಯ "ಕೀಟಗಳನ್ನು ರಕ್ಷಿಸಿ; ಹಕ್ಕಿಗಳನ್ನು ರಕ್ಷಿಸಿ ಎನ್ನುವುದು ಆಗಿದೆ.

ಇದನ್ನೂ ಓದಿರಿ:HSRP Number Plate: ನಿಮ್ಮ ವಾಹನಕ್ಕೆ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಹಾಕಿಸಿಲ್ಲವೇ, ದಂಡ ಬೀಳುತ್ತೆ ಹುಷಾರು

ಪ್ರತಿ ವರ್ಷ ಮೇ 11 ಹಾಗೂ ಅಕ್ಟೋಬರ್‌ 12ರಂದು ವಿಶ್ವದಾದ್ಯಂತ ಜನರು ವಿಶ್ವ ಪಕ್ಷಿ ವಲಸೆ ದಿನವನ್ನು ಆಚರ...