Bangalore, ಏಪ್ರಿಲ್ 29 -- ಬೆಂಗಳೂರು: ಮೇ ತಿಂಗಳಲ್ಲಿ ಹಲವು ಕೊರಿಯನ್‌ ಡ್ರಾಮಾಗಳು (May K-drama releases) ರಿಲೀಸ್‌ ಆಗಲಿವೆ. ಅದ್ಭುತವಾದ ಪ್ರೇಮಕಥೆಗಳು, ಹಾಸ್ಯ, ರೋಮ್ಯಾಂಟಿಕ್‌ ತಿರುವುಗಳು, ಸಸ್ಪೆನ್ಸ್‌ ಒಳಗೊಂಡ ಕೊರಿಯನ್‌ ಡ್ರಾಮಾಗಳು ಒಟಿಟಿಯಲ್ಲಿ ಬಿಡುಗಡೆಯಾಗಲಿವೆ. ಭಾರತದ ಯುವ ಜನತೆಗೆ ಕೊರಿಯನ್‌ ಡ್ರಾಮಾಗಳು ಅಚ್ಚುಮೆಚ್ಚು. ಕಾಲೇಜು ತರುಣಿ ತರುಣರಿಗಂತೂ ಕೊರಿಯನ್‌ ಡ್ರಾಮಾಗಳು, ಕೊರಿಯನ್‌ ಹೀರೋ ಹೀರೋಯಿನ್‌ಗಳೆಂದರೆ ವಿಶೇಷ ಆಸಕ್ತಿ ಇದೆ. ಪ್ರಪಂಚಾದ್ಯಂತ ಕೊರಿಯನ್‌ ಡ್ರಾಮಾಗಳಿಗೆ ದೊಡ್ಡ ಮಟ್ಟದ ಪ್ರೇಕ್ಷಕರಿದ್ದಾರೆ. ಮುಂದಿನ ತಿಂಗಳಲ್ಲಿ ರಿಲೀಸ್‌ ಆಗಲಿರುವ ಕೆಲವು ಕೊರಿಯನ್‌ ಡ್ರಾಮಾಗಳ ವಿವರ ಇಲ್ಲಿದೆ.

ಬಿಡುಗಡೆ ದಿನಾಂಕ: ಮೇ 1

ತಾರಾಗಣ: ಕೋ ಕ್ಯೂಂಗ್ ಪಿಯೋ, ಕಾಂಗ್ ಹಾನ್ ನಾ ಮತ್ತು ಜೂ ಜಾಂಗ್ ಹ್ಯುಕ್

ಎಪಿಸೋಡ್‌ಗಳು: 12

ಎಲ್ಲಿ ನೋಡಬಹುದು: ಜೆಟಿಬಿಸಿಯಲ್ಲಿ ಬುಧವಾರ-ಗುರುವಾರ , ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.

ಬಿಡುಗಡೆಯ ದಿನಾಂಕ: ಮೇ 4

ತಾರಾಗಣ: ಜಂಗ್ ಕಿ ಯೋಂಗ್, ಚುನ್ ವ...