Bengaluru, ಏಪ್ರಿಲ್ 28 -- ಬೆಂಗಳೂರು: ಕರ್ನಾಟಕ ರಸ್ತೆ ಸಾರಿಗೆ ನಿಗಮವು( KSRTC) ಬಹುದಿನಗಳ ಬೇಡಿಕೆಯಂತೆ ಪ್ರಯಾಣಿಕ ಸ್ನೇಹಿ ವ್ಯವಸ್ಥೆಯನ್ನು ಸದ್ಯದಲ್ಲೇ ಜಾರಿಗೊಳಿಸಿದೆ. ಪ್ರಯಾಣಿಕರು ನಗದು ಹಣ ಕೊಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕ್ಯಾಶ್‌ಲೆಸ್‌ ಸೇವೆಗೆ ಮುಂದಾಗಿದೆ. ಈಗಾಗಲೇ ಇರುವ ಎಲೆಕ್ಟ್ರಾನಿಕ್‌ ಟಿಕೆಟಿಂಗ್‌ ಮೆಷಿನ್ಸ್(‌ ETM)ಗೆ ಯುನಿಫೈಡ್‌ ಪೇಮೆಂಟ್ಸ್‌ ಇಂಟರ್‌ಫೇಶ್‌( UPI) ಅನ್ನು ಜೋಡಿಸಲಾಗುತ್ತದೆ. ಮೆಷಿನ್‌ ಮೂಲಕವೇ ಹಣ ಪಾವತಿ ಮಾಡಿ ಪ್ರಯಾಣಿಕರು ಸುಲಭವಾಗಿ ಟಿಕೆಟ್‌ ಪಡೆಯಬಹುದು. ಈಗಿರುವಂತೆ ನಗದು ಪಡೆದು ಟಿಕೆಟ್‌ ನೀಡುವ ವ್ಯವಸ್ಥೆಯೂ ಮುಂದುವರಿಯಲಿದೆ. ಜತೆಗೆ ಪ್ರಯಾಣಿಕರು ಡಿಜಿಟಲ್‌ ಪೇಮೆಂಟ್‌ ವ್ಯವಸ್ಥೆಯನ್ನು ಉಪಯೋಗಿಸಿಕೊಳ್ಳಬಹುದು.

ಕೆಎಸ್‌ಆರ್‌ಟಿಸಿ ಈಗಾಗಲೇ ಬಸ್‌ ನಿಲ್ದಾಣಗಳಲ್ಲಿ ಮುಂಗಡ ಬುಕ್ಕಿಂಗ್‌ಗೆ ಯುಪಿಐ ಸೇವೆ ನೀಡಿದೆ. ಡಿಜಿಟಲ್‌ ಮಾರ್ಗದಲ್ಲಿ ಹಣ ಪಾವತಿಸಿ ಟಿಕೆಟ್‌ ಪಡೆಯಬಹುದು. ಆದರೆ ಕೆಎಸ್‌ಆರ್‌ಟಿಸಿಯಲ್ಲೇ ಬಸ್‌ನಲ್ಲಿ ಪ್ರಯಾಣಿಸುವವರು ನಗದು ಪಾವತಿಸಿ ಪ್ರಯಾಣ ಮಾಡಬೇಕ...