Bengaluru, ಏಪ್ರಿಲ್ 28 -- ಬೆಂಗಳೂರು: ಮೇ 10 ರಂದು ಅಕ್ಷಯ ತೃತೀಯ ಇದೆ. ಈ ದಿನ ಮನೆಗೆ ಚಿನ್ನ ತಂದರೆ ಶುಭ ನಂಬಿಕೆ ಇದೆ. ಒಂದು ಪುಟ್ಟ ಮೂಗುತ್ತಿಯಾದರೂ ಸರಿ ಆ ದಿನ ಮನೆಗೆ ಚಿನ್ನ ಕೊಂಡು ತರಬೇಕು ಅನ್ನೋದು ಎಲ್ಲರ ಕನಸು. ಆದರೆ ಚಿನ್ನದ ಬೆಲೆ ದಿನೇ ದಿನೆ ಏರುತ್ತಿದೆಯೇ ಹೊರತು ಕಡಿಮೆ ಆಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಶುಕ್ರವಾರ ಕಡಿಮೆ ಆಗಿದ್ದ ಚಿನ್ನದ ಬೆಲೆ ಶನಿವಾರ ಏರಿಕೆ ಆಗಿದೆ. ಇಂದು( ಭಾನುವಾರ) ಇನ್ನಷ್ಟು ಹೆಚ್ಚಾಗಿದೆ.

ಕರ್ನಾಟಕದ ಪ್ರಮುಖ ನಗರಗಳು, ಹೊರ ರಾಜ್ಯಗಳಲ್ಲಿ ಇಂದು 22 ಕ್ಯಾರೆಟ್‌ ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ ಎಷ್ಟಿದೆ ನೋಡೋಣ.

ಇಂದು ಭಾನುವಾರ 22 ಕ್ಯಾರೆಟ್‌ ಚಿನ್ನ 20 ರೂ ಏರಿಕೆ ಆಗಿದೆ. ಅದರಂತೆ ಇಂದು ಗ್ರಾಂಗೆ 6,685 ರೂ. ಇದೆ. 8 ಗ್ರಾಂ ಚಿನ್ನದ ಬೆಲೆ 53,480 ರೂ. 10 ಗ್ರಾಂ ಚಿನ್ನದ ಬೆಲೆ 66,850 ರೂ. ಹಾಗೂ 100 ಗ್ರಾಂ ಚಿನ್ನದ ಬೆಲೆ 6,68,500 ರೂ. ನಿಗದಿ ಆಗಿದೆ.

24 ಕ್ಯಾರೆಟ್‌ ಚಿನ್ನದ ಬೆಲೆ ಒಂದು ಗ್ರಾಂ 7,293 ರೂ. 8 ಗ್ರಾಂಗೆ 58,344 ರೂ. 10 ಗ್ರಾಂ 72,930 ರೂ...