Puttur, ಏಪ್ರಿಲ್ 29 -- ಕಳೆದ 30 ವರ್ಷಗಳಲ್ಲಿ ಕ್ಯಾನ್‌ ಚಿತ್ರೋತ್ಸವದಲ್ಲಿ ಭಾರತದ ಉಪಸ್ಥಿತಿ ಅನೇಕಪಟ್ಟು ಹೆಚ್ಚಾಗಿದೆ. ಈಗ ಫ್ರೆಂಚ್‌ ರಿವೇರಾದಲ್ಲಿ ನಟರು, ನಿರ್ದೇಶಕರು ಮತ್ತು ಕೆಲವು ಪತ್ರಕರ್ತರು ಸೇರಿದಂತೆ ಕಡಿಮೆಯೆಂದರೂ 300 ಭಾರತೀಯರು ಇದ್ದೇ ಇರುತ್ತಾರೆ. ಎನ್‌ಎಎಫ್‌ಡಿಸಿಯ ನೀನಾ ಲತ್ ಗುಪ್ತಾ ಅವರು ಮೊದಲು ಸ್ಥಾಪಿಸಿದ ಇಂಡಿಯಾ ಪೆವಿಲಿಯನ್ ಕೂಡ ಅಲ್ಲಿದೆ.

ದುಃಖಕರ ಸಂಗತಿಯೆಂದರೆ ಕಾನ್‌ ಚಿತ್ರೋತ್ಸವದಲ್ಲಿ ಭಾರತದ ಸಿನಿಮಾಗಳ ಪ್ರಾತಿನಿಧ್ಯ ಕಳಪೆಯಾಗಿದೆ. ಅಂತಾರಾಷ್ಟ್ರೀಯ ವೀಕ್ಷಕರನ್ನು ಖುಷಿಪಡಿಸುವಂತಹ ಚಲನಚಿತ್ರಗಳನ್ನು ನಾವು ಮಾಡದೆ ಇರಬಹುದು ಅಥವಾ ಪಾಶ್ಚಿಮಾತ್ಯ ಮನಸ್ಸುಗಳಿಗೆ ಭಾರತೀಯ ಸಿನಿಮಾ ತುಂಬಾ ಗೊಂದಲಮಯವಾಗಿರಬಹುದು. ನಮ್ಮ ದೇಶದಿಂದ ಕಾನ್‌ ಚಲನಚಿತ್ರೋತ್ಸವಕ್ಕೆ ಸಿನಿಮಾಗಳನ್ನು ಆಯ್ಕೆ ಮಾಡುವವರಿಗೆ ಕಾನ್‌ ಚಿತ್ರೋತ್ಸವ ಏನು ಬಯಸುತ್ತದೆ ಎನ್ನುವ ಗೊಂದಲ ಇರಬಹುದು ಅಥವಾ ಕಡಿಮೆ ತಿಳವಳಿಕೆ ಇರಬಹುದು. ಒಮ್ಮೆ ಅಧಿಕೃತ ಭಾಗವಾಗಿ ಬಾಲಿವುಡ್‌ನಿಂದ ದೇವದಾಸ್‌ ಸಿನಿಮಾವನ್ನು ಆಯ್ಕೆ ಮಾಡಲಾಯಿತು. ಇದನ್ನ...