Bengaluru, ಮಾರ್ಚ್ 13 -- Paytm Fast Tag: ಒಂದೇ ಕಾರ್ಡ್‌ ಬಳಸಿ ಹಲವು ಖಾತೆಗಳನ್ನು ತೆಗೆಯುವುದು, ಕೆಲ ಖಾತೆಗಳಲ್ಲಿ ನಿಗದಿತ ಮಿತಿ ಮೀರಿ ಭಾರೀ ಮೊತ್ತದ ವಹಿವಾಟು ನಡೆದಿರುವುದು, ಆರ್‌ಬಿಐ ನಿಯಮಾವಳಿಯನ್ನು ಕಟ್ಟುನಿಟ್ಟಾಗಿ ಪಾಲಿಸದೆ ಇರುವುದು ಸೇರಿದಂತೆ ಇನ್ನಿತರ ಕಾರಣಗಳಿಂದ ಭಾರತೀಯ ರಿಸರ್ವ್‌ ಬ್ಯಾಂಕ್‌ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ ಫೆ. 29ರಂದೇ ನಿರ್ಬಂಧ ವಿಧಿಸಿತ್ತು.

ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ನಿರ್ಬಂಧದ ಗಡುವನ್ನು ಮಾರ್ಚ್‌ 15ಕ್ಕೆ ವಿಸ್ತರಿಸಿದೆ. ಗ್ರಾಹಕರಿಗೆ ಹೆಚ್ಚುವರಿ 15 ದಿನಗಳ ಕಾಲ ಗಡುವು ನೀಡಲಾಗಿದ್ದು ಬಳಕೆದಾರರಿಗೆ ರಿಲೀಫ್‌ ದೊರೆತಂತೆ ಆಗಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ ಖಾತೆ ಹೊಂದಿರುವ ಗ್ರಾಹಕರು, ವ್ಯಾಪಾರಿಗಳು, ನ್ಯಾಷನಲ್‌ ಕಾಮನ್‌ ಮೊಬಿಲಿಟಿ ಕಾರ್ಡ್ (NCMC) ಬಳಕೆದಾರರು, ಭಾರತ್ ಬಿಲ್ ಪೇಮೆಂಟ್‌ ಸಿಸ್ಟಮ್ ಬಳಸಿ ಪೇಮೆಂಟ್‌ ನಡೆಸುವವರು ಕೂಡಾ ತುಸು ನಿರಾಳರಾಗಬಹುದು. ಆದರೆ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ ಖಾತೆ ಹೊಂದಿರುವ ಬಳಕೆದಾರರಿಗೆ, ನಿಷೇಧದ ಬಗ್ಗೆ ಕೆಲವು ಗೊ...