ಭಾರತ, ಏಪ್ರಿಲ್ 29 -- ಅನುವಾದ: ನಾನು ಮನುಷ್ಯರೂಪದಲ್ಲಿ ಇಳಿದು ಬಂದಾಗ ಮೂಢರು ನನ್ನನ್ನು ಅಪಹಾಸ್ಯ ಮಾಡುತ್ತಾರೆ. ಇರುವುದೆಲ್ಲದರ ಪ್ರಭು ನಾನೇ. ನನ್ನ ಈ ದಿವ್ಯಪ್ರಕೃತಿಯು ಅವರಿಗೆ ತಿಳಿಯದು.

ಭಾವಾರ್ಥ: ಈ ಅಧ್ಯಾಯದ ಇತರ ವಿವರಣೆಗಳಿಂದ ದೇವೋತ್ತಮ ಪರಮ ಪುರುಷನು ಮನುಷ್ಯರೂಪದಲ್ಲಿ ಕಾಣಿಸಿಕೊಂಡರೂ ಸಾಮಾನ್ಯ ಮನುಷ್ಯನಲ್ಲ ಎನ್ನುವುದು ಸ್ಪಷ್ಟವಾಗಿದೆ. ಸಮಸ್ತ ವಿಶ್ವದ ಸೃಷ್ಟಿ, ಸ್ಥಿತಿ ಮತ್ತು ಲಯಗಳನ್ನು ನಿರ್ವಹಿಸುವ ದೇವೋತ್ತಮ ಪರಮ ಪುರುಷನು ಮನುಷ್ಯನಾಗಿರಲು ಸಾಧ್ಯವಿಲ್ಲ. ಆದರೂ ಕೃಷ್ಣನೊಬ್ಬ ಬಲಶಾಲಿ ಮನುಷ್ಯ ಮಾತ್ರ, ಬೇರೇನೂ ಅಲ್ಲ ಎಂದು ಭಾವಿಸುವ ಅನೇಕ ಮೂಢರಿದ್ದಾರೆ. ಆದರೆ ಬ್ರಹ್ಮಸಂಹಿತೆಯಲ್ಲಿ ದೃಢಪಡಿಸಿರುವಂತೆ (ಈಶ್ವರಃ ಪರಮಃ ಕೃಷ್ಣಃ) ಆತನೇ ಮೂಲ ಪರಮ ಪುರುಷನು. ಆತನು ಪರಮ ಪ್ರಭು (Bhagavad Gita Updesh In Kannada).

ಇದನ್ನೂ ಓದಿ: ಭಗವದ್ಗೀತೆ: ಮನುಷ್ಯ ಈ 4 ವಿಷಯಗಳಲ್ಲಿ ಬಲವಾಗಿ ನಿಂತಾಗ ಪರಿಶುದ್ಧವಾದ ಜೀವನ ನಡೆಸುತ್ತಾನೆ; ಗೀತೆಯ ಸಾರಾಂಶ ತಿಳಿಯಿರಿ

ಈಶ್ವರರು, ನಿಯಂತ್ರಕರು ಅನೇಕರಿದ್ದಾರೆ. ಒ...