ಭಾರತ, ಜನವರಿ 6 -- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಯಾವ ಕೆಲಸ ಕೈಗೆತ್ತಿಕೊಂಡರೂ ಸಂಪೂರ್ಣವಾಗಿ ಮುಗಿಸುವುದಿಲ್ಲ ಎನ್ನುವುದಕ್ಕೆ ಹತ್ತಾರು ನಿದರ್ಶನಗಳನ್ನು ಕೊಡಬಹುದು. ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬರುವುದಿಲ್ಲ, ಶಾಲೆಗಳನ್ನು ನಡೆಸಲು ಬರುವುದಿಲ್ಲ, ಸೊಳ್ಳೆ ನಿಯಂತ್ರಣ ಮಾಡಲು ಬರುವುದಿಲ್ಲ. ರಸ್ತೆ ಗುಂಡಿಗಳನ್ನಂತೂ ಮುಚ್ಚಲು ಬರುವುದೇ ಇಲ್ಲ ಎನ್ನುವುದು ಜಗಜ್ಜಾಹೀರಾಗಿದೆ. ಬಹುಶಃ ಕೆಲಸ ಆಗಲಿ ಆಗದಿರಲಿ ಐದಂಕಿ, ಆರಂಕಿ ಬಿಲ್ ಮಾಡುವುದರಲ್ಲಿ ಮಾತ್ರ ಸಿದ್ದಹಸ್ತರು ಎಂದು ಹೇಳದೆ ವಿಧಿಯಿಲ್ಲ.

ಬಿಬಿಎಂಪಿ ಅಸಾಮರ್ಥ್ಯಕ್ಕೆ ಹೊಸ ನಿದರ್ಶನವೊಂದು ಲಭ್ಯವಾಗಿದೆ. 2023ರಲ್ಲಿ ಕೇವಲ 2 ಕೆರೆಗಳನ್ನು ಮಾತ್ರ ಪುನರುಜ್ಜೀವನ ಮಾಡಿದೆ. 30 ಕೆರೆಗಳ ಪುನರುಜ್ಜೀವನ ಪ್ರಗತಿಯಲ್ಲಿದೆ ಎಂದು ಹೇಳಿಕೊಂಡಿದೆ. ಬೆಂಗಳೂರಿನಲ್ಲಿ 201 ಕೆರೆಗಳಿದ್ದು, 6,009.36 ಎಕರೆ ವಿಸ್ತೀರ್ಣ ಹೊಂದಿವೆ. ಬಹುತೇಕ ಕೆರೆಗಳು ಮಲಿನಗೊಂಡಿವೆ. ಅನೇಕ ಕೆರೆಗಳು ತ್ವರಿತವಾಗಿ ಪುನರುಜ್ಜೀವನಗೊಳಿಸಿದರೆ ಮಾತ್ರ ಉಳಿದುಕೊಳ್ಳುವ ಪರಿಸ್ಥಿತಿಯಲ್ಲಿ...