Bangalore, ಮಾರ್ಚ್ 29 -- ಬೆಂಗಳೂರು: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ( NHAI) ಹೆದ್ದಾರಿಗಳ ಟೋಲ್‌ ಅನ್ನು ಏಪ್ರಿಲ್‌ 1ರಿಂದ ಏರಿಕೆ ಮಾಡಲಿದೆ. ಅದೂ ಶೇ. 3ರಿಂದ ಶೇ.14ರವರೆಗೆ ಟೋಲ್‌ ದರಗಳು ಹೆಚ್ಚಳವಾಗಲಿವೆ. ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ವೇ, ಬೆಂಗಳೂರು ಹೈದ್ರಾಬಾದ್‌, ಹೊಸಕೋಟೆ-ದೇವನಹಳ್ಳಿ ವಲಯದ ಬೆಂಗಳೂರು ಸೆಟಲೈಟ್‌ ರಿಂಗ್‌ ರಸ್ತೆಯ( STRR) ಟೋಲ್‌ ಶುಲ್ಕದಲ್ಲಿ ಏರಿಕೆಯಾಗಲಿದೆ. ಆರು ತಿಂಗಳ ಹಿಂದೆಯಷ್ಟೇ ಕೆಲವು ಟೋಲ್‌ಗಳ ಏರಿಕೆಯಾಗಿತ್ತು. ಈಗ ವಾರ್ಷಿಕ ಏರಿಕೆಯಂತೆ ಏಪ್ರಿಲ್‌ 1ರಿಂದ ಹೆಚ್ಚಾಗಲಿದೆ ಎಂದು ಪ್ರಾಧಿಕಾರ ಮಾಹಿತಿ ನೀಡಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹೋಲ್‌ಸೇನ್‌ ಪ್ರೈಸ್‌ ಇಂಡೆಕ್ಸ್‌ನಂತೆ ಹೊಸ ದರಗಳು ಜಾರಿಯಾಗುತ್ತಿವೆ. ಈಗಿರುವ ದರವನ್ನು ಅಲ್ಪ ಪ್ರಮಾಣದಲ್ಲಿ ಏರಿಸಲಾಗಿದ್ದು, ಇದು ಮುಂದಿನ ವರ್ಷ 2025ರ ಮಾರ್ಚ್‌ 31ರವರೆಗೆ ಈ ದರ ಜಾರಿಯಲ್ಲಿರಲಿದೆ ಎಂದು ತಿಳಿಸಲಾಗಿದೆ.

ಬೆಂಗಳೂರು ಹಾಗೂ ಮೈಸೂರು ನಡುವಿನ ಎಕ್ಸ್‌ ಪ್ರೆಸ್‌ ವೇ ಹಾಗೂ ಬೆಂಗಳೂರು ಹೈದ್ರಾಬಾದ್...