ಭಾರತ, ಏಪ್ರಿಲ್ 28 -- ಬೆಂಗಳೂರು: ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಇತ್ತೀಚೆಗೆ ಭಾರಿ ಮಳೆಯಾಗಿತ್ತು (Karnataka Rain). ಇದರಿಂದ ಕೆಲವೊಂದು ಜಲಾಶಯಗಳಿಗೆ (Reservoirs) ಅಲ್ಪ ಸ್ವಲ್ಪ ನೀರು ಕೂಡ ಬಂದಿತ್ತು. ಆದರೆ ಮಳೆ ಕಡಿಮೆಯಾಗಿದೆ (Rain Shortage). ಮತ್ತೆ ರಣ ಬಿಸಲು, ಬಿಸಿ ಗಾಳಿ (Heat Wave) ಮುಂದುವರಿದ ಪರಿಣಾಮ ಡ್ಯಾಮ್‌ಗಳಲ್ಲಿ ನೀರಿನ ಮಟ್ಟವು ಆತಂಕಕಾರಿಯಾಗಿ ಕುಸಿಯುತ್ತಿದೆ. ಜಲಾಶಯಗಳ ಒಟ್ಟು ಸಾಮಾರ್ಥ್ಯದ ಶೇಕಡಾ 25ಕ್ಕಿಂತ ಕಡಿಮೆ ಮಟ್ಟಕ್ಕೆ ಬಂದಿವೆ. ನೀರಿನ ಕೊರತೆ ನಗರ ಹಾಗೂ ಗ್ರಾಮೀಣ ಪ್ರದೇಶದ ಜನರ ಮೇಲೆ ಪರಿಣಾಮ ಬೀರಿದೆ. ಅದರಲ್ಲೂ ವಿಶೇಷವಾಗಿ ಕೃಷಿ ಚಟುವಟಿಕೆಗಳಿಗೆ ಹೊಡೆತೆ ನೀಡುತ್ತದೆ.

ಕಳೆದ ವರ್ಷದ ಇದೇ ಅವಧಿಯಲ್ಲಿ ಕರ್ನಾಟಕದ ಪ್ರಮುಖ 14 ಜಲಾಶಯಗಳಲ್ಲಿ ಒಟ್ಟಾರೆಯಾಗಿ 269 ಟಿಎಂಸಿಯಷ್ಟು ನೀರಿನ ಸಂಗ್ರಹವಿತ್ತು. ಆದರೆ 2024ರ ಏಪ್ರಿಲ್ ತಿಂಗಳಲ್ಲಿ ಕೇವಲ 217.75 ಟಿಎಂಸಿಗೆ ಇಳಿಕೆಯಾಗಿದೆ. ಈ ಡ್ಯಾಮ್‌ಗಳಲ್ಲಿ ಒಟ್ಟು 895.62 ಟಿಎಂಸಿ ಸಂಗ್ರಹದ ಸಾಮರ್ಥ್ಯವಿದೆ. ಆದರೆ ಮಳೆ ಕೊರತೆ ಹಾಗ...