Bangalore, ಮೇ 16 -- ಬೆಂಗಳೂರು: ಕಾನ್‌ ಚಲನಚಿತ್ರೋತ್ಸವದಲ್ಲಿ ಈ ಬಾರಿಯೂ ಬಾಲಿವುಡ್‌ ನಟಿ ಐಶ್ವರ್ಯಾ ರೈ ಅವರು ರೆಡ್‌ ಕಾರ್ಪೆಟ್‌ನಲ್ಲಿ ನಡೆಯಲು ಸಜ್ಜಾಗಿದ್ದಾರೆ. ಬುಧವಾರ ಸಂಜೆ ಐಶ್ವರ್ಯಾ ಬಚ್ಚನ್ ತನ್ನ ಮಗಳು ಆರಾಧ್ಯ ಬಚ್ಚನ್ ಜತೆ ವಿಮಾನ ನಿಲ್ದಾಣದಲ್ಲಿದ್ದರು. ಕಾನ್‌ ಚಿತ್ರೋತ್ಸವಕ್ಕೆ ಹೋಗಲು ಸಿದ್ಧವಾಗಿದ್ದ ಅವರನ್ನು ಅಭಿಮಾನಿಗಳು ಒಂದು ಕ್ಷಣ ಆತಂಕಕ್ಕೆ ಈಡಾದರು. ಏಕೆಂದರೆ, ಅವರ ಕೈಗೆ ಸ್ಲಿಂಗ್‌ ಹಾಕಲಾಗಿತ್ತು. ದೊಡ್ಡ ಬ್ಯಾಂಡೇಜ್‌ ನೋಡಿ ಫ್ಯಾನ್ಸ್‌ ಕಳವಳಗೊಂಡರು. ಈ ಗಾಯದ ಬಗ್ಗೆ ನಟಿ ಯಾವುದೇ ಮಾಹಿತಿ ನೀಡಿಲ್ಲ. ಅಭಿಮಾನಿಗಳು ಸೋಷಿಯಲ್‌ ಮೀಡಿಯಾದಲ್ಲಿ ಈ ಗಾಯದ ಕುರಿತು ಚರ್ಚಿಸುತ್ತಿದ್ದಾರೆ.

ಐಶ್ವರ್ಯಾ ರೈ ಅವರು ಮಗಳು ಆರಾಧ್ಯಳೊಂದಿಗೆ ಕಾರಿನಿಂದ ಇಳಿಯುತ್ತಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ತನ್ನ ಬಲಗೈ ಅನ್ನು ಸ್ಲಿಂಗ್‌ನಲ್ಲಿ ಇಟ್ಟುಕೊಂಡಿದ್ರು. ಮಣಿಕಟ್ಟಿನ ಸುತ್ತಲೂ ಬಿಳಿ ಬ್ಯಾಂಡೇಜ್‌ ಕಾಣಿಸುತ್ತಿತ್ತು. ಮೊಣಕಾಲು ಉದ್ದದ ನೀಲಿ ಕೋಟ್‌ ಮತ್ತು ಕಪ್ಪು ಉಡುಗೆಯನ್ನು ಧರ...