ಭಾರತ, ಏಪ್ರಿಲ್ 25 -- ಮಹಿಳೆಯರಿಗೆ ಏನೇ ಸಮಸ್ಯೆಯಾದರೂ ತಮ್ಮ ಸಂಗಾತಿಯೊಂದಿಗೆ ಇಲ್ಲವೇ ಸಂಬಂಧಿಕರೊಂದಿಗೆ ಹೇಳಿಕೊಂಡು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ. ಆದರೆ ಇಂಥ ವಿಚಾರದಲ್ಲಿ ಪುರುಷರು ಸ್ವಲ್ಪ ಭಿನ್ನವಾಗಿರುತ್ತಾರೆ. ಪುರುಷರು ತಮ್ಮ ಸಮಸ್ಯೆಗಳನ್ನು ಅಷ್ಟು ಬೇಗ ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಸಾಮಾನ್ಯವಾಗಿ ಮರೆಮಾಚುವ ಮೂಲಕ ತಮ್ಮೊಳಗೆ ಹೋರಾಟವನ್ನು ಮಾಡುತ್ತಾರೆ. ಇದು ಕಡಿಮೆ ರೋಗನಿರ್ಣಯ ಹಾಗೂ ಖಿನ್ನತೆಗೆ (Depression in Men) ಕಾರಣವಾಗುತ್ತದೆ ಎಂದು ತಜ್ಞರು ವೈದ್ಯರು ಹೇಳುತ್ತಾರೆ. ಪುರುಷರಲ್ಲಿನ ಖಿನ್ನತೆಯ ಲಕ್ಷಣಗಳನ್ನು ಅರ್ಥಮಾಡಿಕೊಳ್ಳುವುದು ಪರಿಹಾರದ ಮೊದಲ ಹಂತವಾಗಿದೆ.

ಖಿನ್ನತೆ ಒಂದು ಮಾನಸಿಕ ಆರೋಗ್ಯ ಸಮಸ್ಯೆಯಾಗಿದ್ದು, ಲಿಂಗ ಭೇದಭಾವ ಇಲ್ಲದೆ ಯಾರಿಗೂ ಬೇಕಾದರೂ ಬರುತ್ತದೆ. ಅದರಲ್ಲೂ ಇತ್ತೀಚೆಗೆ ಸರ್ವೇ ಸಾಮಾನ್ಯವಾದ ಮಾನಸಿಕ ಕಾಯಿಲೆಯಾಗಿದೆ. ಮಹಿಳೆಯರಿಗಿಂತ ಪುರುಷರು ವಿಭಿನ್ನವಾದ ಖಿನ್ನತೆಯನ್ನು ಅನುಭವಿಸುತ್ತಾರೆ. ಹೀಗಾಗಿ ಪುರುಷರಲ್ಲಿ ಖಿನ್ನತೆಯ...