Chikkodi, ಏಪ್ರಿಲ್ 28 -- ಚಿಕ್ಕೋಡಿ (ಕಾಗವಾಡ): ಪ್ರತಿ ಬಾರಿ ರಾಜ್ಯಕ್ಕೆ ಬಂದಾಗಲೆಲ್ಲಾ ಮೋದಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ. ಹೆಣ್ಣುಮಕ್ಕಳ ತಾಳಿ, ಕೈಬಳೆ ಬಗ್ಗೆ ಸುಳ್ಳು ಹೇಳ್ಕೊಂಡು ತಿರುಗೋ ಮೋದಿಯಿಂದ ಪ್ರಧಾನಿ ಹುದ್ದೆಗೆ ಮರ್ಯಾದೆ ಬರಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಪ್ರಿಯಾಂಕ ಜಾರಕಿಹೊಳಿ ಅವರ ಗೆಲುವಿನ ಸಂದೇಶ ನೀಡಲು ಸಂಘಟಿಸಿದ್ದ ಪ್ರಜಾಧ್ವನಿ-2 ಜನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಇಷ್ಟೊಂದು ಸುಳ್ಳು ಹೇಳೋ ಮೋದಿಗೆ ನಾಚಿಕೆನೂ ಆಗಲ್ಲ. ಇವರಿಗೆ ಮಾನ ಮರ್ಯಾದೆನೂ ಇಲ್ಲ. ಯಪ್ಪಾ ಯಪ್ಪಾ ಯಪ್ಪಾ ಈ ಮೋದಿ ಯಾವ ಮಟ್ಟದ ಸುಳ್ಳು ಸೃಷ್ಟಿ ಮಾಡ್ತಾರಲ್ಲಾ ನಾಚ್ಕೆನೂ ಆಗಲ್ಲ ಎಂದು ಮೋದಿ ಅವರ ಸುಳ್ಳುಗಳನ್ನು ಪಟ್ಟಿ ಮಾಡಿದ ಸಿಎಂ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ಮುಂದುವರೆಸಿದರು.

ಕಿತ್ತೂರು ರಾಣಿ ಜಯಂತಿ ಆಚರಣೆಗೆ ಆದೇಶಿಸಿದ್ದು ನಾವು. ಇದನ್ನು ಬೊಮ್ಮಾಯಿ ಮಾಡ್ಲಿಲ್ಲ, ಯಡಿಯೂರಪ್ಪ ಮಾಡ್ಲಿಲ್ಲ. ನಾವು ಯಾವತ್ತೂ ಶಿವಾಜಿ ಮ...