ಭಾರತ, ಮಾರ್ಚ್ 19 -- ಬೆಂಗಳೂರು: ಲೋಕಸಭೆ ಚುನಾವಣೆಗೆ (Lok Sabha Elections 2024) ದಿನಾಂಕ ನಿಗದಿಯಾಗಿದೆ. ಕರ್ನಾಟಕದ 28 ಲೋಕಸಭಾ ಸ್ಥಾನಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ದಕ್ಷಿಣ ಕರ್ನಾಟಕದಲ್ಲಿ ಏಪ್ರಿಲ್ 26 ರಂದು ಮತ್ತು ಉತ್ತರ ಕರ್ನಾಟಕದಲ್ಲಿ ಮೇ 7 ರಂದು ಮತದಾನ ನಡೆಯಲಿದೆ. ಜೂನ್ 4 ರಂದು ಫಲಿತಾಂಶಗಳನ್ನು ಪ್ರಕಟಿಸಲಾಗುವುದು ಎಂದು ಇದೇ 16 ರಂದು (ಶನಿವಾರ) ಭಾರತೀಯ ಚುನಾವಣಾ ಆಯೋಗ ಘೋಷಿಸಿದೆ. ಆದರೆ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bangalore Voters) ಪ್ರತಿ ಬಾರಿಯೂ ಕಡಿಮೆ ಮತದಾನ ಪ್ರಮಾಣವನ್ನು ಹೊಂದಿದ್ದು, ಈ ಭಾರಿ ಏಪ್ರಿಲ್ 26 ರ ಶುಕ್ರವಾರ ಉದ್ಯಾನನಗರಿಯಲ್ಲಿ ಮತದಾನ ನಡೆಯಲಿದೆ. ಹೀಗಾಗಿ ಅಂದು ಐಟಿ-ಬಿಟಿ, ಕಂಪನಿಗಳು, ಕಾರ್ಖಾನೆಗಳು ಸೇರಿದಂತೆ ಎಲ್ಲಾ ವಲಯಗಳಿಗೂ ರಜೆ ಇರುತ್ತದೆ. ಐಟಿ-ಬಿಟಿಯವರಿಗೆ ಶನಿವಾರ ಮತ್ತು ಭಾನುವಾರ ಸಾಮಾನ್ಯವಾಗಿ ವಾರಂತ್ಯದ ರಜೆ ಇರುತ್ತದೆ. ಆದರೆ ಶುಕ್ರವಾರ ಮತದಾನಕ್ಕಾಗಿ ರಜೆ ಇರುವುದರಿಂದ ಒಟ್ಟು 3 ದಿನ ರಜೆ ಸಿಕ್ಕಂತಾಗುತ್ತದೆ. ಹೀಗಾಗಿ ಮತದಾನ ಮಾಡು...