Bengaluru,ಬೆಂಗಳೂರು, ಫೆಬ್ರವರಿ 20 -- ಇಂಗ್ಲೆಂಡ್‌ನ ಎಲ್ಲ ಶಾಲೆಗಳಲ್ಲಿ ಮೊಬೈಲ್‌ ಫೋನ್‌ ಬಳಕೆಯನ್ನು ನಿಷೇಧಿಸಲಾಗಿದೆ. ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಈ ವಿಷಯವನ್ನು ಪ್ರಕಟಿಸಿದ್ದು, ಎಕ್ಸ್‌ ಪ್ಲಾಟ್‌ಫಾರಂನಲ್ಲಿ ವಿಡಿಯೋ ಸಂದೇಶದ ಮೂಲಕ ವಿವರ ನೀಡಿದ್ದಾರೆ. ಇತರೆ ಕೆಲವು ಯುರೋಪ್ ದೇಶಗಳು ಅನುಸರಿಸಿದ ಕ್ರಮ ಮತ್ತು ಅವುಗಳ ಫಲಿತಾಂಶ ಆಧರಿಸಿ ಇಂಗ್ಲೆಂಡ್ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.

"ಮಾಧ್ಯಮಿಕ ಶಾಲಾ ಮಕ್ಕಳಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಮಕ್ಕಳು ಫೋನ್ ಕಾರಣ ತಮ್ಮ ಪಾಠಗಳಿಗೆ ಅಡ್ಡಿಯಾಗುತ್ತಿದೆ ಎಂದು ಹೇಳಿದ್ದಾರೆ. ಈಗಾಗಲೇ ತಮ್ಮ ಕ್ಯಾಂಪಸ್‌ಗಳಲ್ಲಿ ಮೊಬೈಲ್ ಫೋನ್‌ ಬಳಕೆಯನ್ನು ನಿಷೇಧಿಸಿರುವ ಶಾಲೆಗಳು 'ಉತ್ತಮ ಕಲಿಕೆ' ವಾತಾವರಣವನ್ನು ರೂಢಿಸಿಕೊಂಡಿವೆ ಎಂದು ಪ್ರಧಾನಿ ರಿಷಿ ಸುನಕ್ ವಿವರಿಸಿದ್ದಾರೆ.

ಇದನ್ನೂ ಓದಿ| ಬೆಂಗಳೂರು ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ತಾಂತ್ರಿಕ ದೋಷದ ಕಾರಣ ರೈಲು ಸಂಚಾರದಲ್ಲಿ ವ್ಯತ್ಯಯ, ನಿತ್ಯ ಪ್ರಯಾಣಿಕರ ಆಕ್ರೋಶ, ಅಸಮಾಧಾನ

ಇಂಗ್ಲೆಂಡಿನಲ್ಲಿ ಸರ್ಕಾರದ ಮಾರ್ಗದ...